Breaking News

ಸರ್ವಧರ್ಮದ ಶಾಂತಿಯ ತೋಟ ಯರನಾಳ ಮಠ – ದುರ್ಯೋಧನ ಐಹೋಳೆ

Spread the love

ಹುಕ್ಕೇರಿ ತಾಲೂಕಿನ ಯರನಾಳದ ಶ್ರೀ ಮಹಾಮಾತಾ ಕಾಳಿಕಾದೇವಿ ಮಠ ಸರ್ವಧರ್ಮದ ಪಕ್ಷಾತೀತ ಆಶ್ರಮವಾಗಿದೆ ಎಂದು ರಾಯಭಾಗ ಶಾಸಕ ಧುಯೋಧನ ಐಹೋಳೆ ಹೇಳಿದರು.

ಅವರು ಇಂದು ಯರನಾಳ ಕಾಳಿಕಾಮಾತೆ ರಥೋತ್ಸವದಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಜಾತಿ ಮತ ಭೇಧ ಭಾವ ಇಲ್ಲದ ಏಕೈಕ ಮಠ ಶ್ರೀ ಬ್ರಹ್ಮಾನಂದ ಅಜ್ಜನವರ ಕಾಳಿಕಾ ಆಶ್ರಮ, ಮಠಕ್ಕೆ ಬರುವ ಜನರಿಂದ ಯಾವದೇ ರೀತಿಯ ಕಾಣಿಕೆ ಪಡೆಯುವದಿಲ್ಲಾ ಕೇವಲ ಭಕ್ತಿ ಶ್ರದ್ಧೆ ಇದ್ದರೆ ಸಾಕು ನಾನು ಪ್ರತಿ ಅಮವಾಸ್ಯೆ ದಿನ ಬಂದು ಅಮ್ಮನವರ ದರ್ಶನ ಪಡೆಯುತ್ತೆನೆ ಎಂದರು.

ನಂತರ ನಡೆದ ಶಿವಾನುಭವ ಗೋಷ್ಟಿಯಲ್ಲಿ ಶ್ರೀ ಬ್ರಹ್ಮಾನಂದ ಅಜ್ಜನವರಿಗೆ ವಿವಿಧ ಮಠಾಧೀಶರು, ಗಣ್ಯರು ಗುರುವಂದನೆ ಸಲ್ಲಿಸಿದರು.
ಬೆಳಗಾವಿ ಪರಶಿಷ್ಟ ಜಾತಿ ದೌರ್ಜನ್ಯ ಸಮಿತಿ ಸರ್ಕಾರೆತರ ಸದಸ್ಯ ಸುರೇಶ್ ತಳವಾರ ಮಾತನಾಡಿ ಮಠದ ಪೀಠಾದ್ಯಕ್ಷರಾದ ಬ್ರಹ್ಮಾನಂದ ಅಜ್ಜನವರು ಬಂದ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸಿ ಮಾರ್ಗದರ್ಶನ ನೀಡುವ ಮೂಲಕ ಜನಪ್ರೀಯತೆ ಹೊಂದಿದ್ದಾರೆ ಎಂದರು


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ