Breaking News

ರಾಯಚೂರು: ಡಾಬಾಗೆ ಅನಧಿಕೃತ ವಿದ್ಯುತ್ ಕೊಡುತ್ತಿದ್ದ ಜೆಸ್ಕಾಂ ಎಂಜಿನಿಯರ್ ಅಮಾನತು

Spread the love

ಸಿರವಾರ (ರಾಯಚೂರು ಜಿಲ್ಲೆ): ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ)‌ ವ್ಯಾಪ್ತಿಯ ಸಿರವಾರ ತಾಲ್ಲೂಕಿನ ಮಲ್ಲಟ ಉಪವಿಭಾಗದ ಶಾಖಾಧಿಕಾರಿ, ಕಿರಿಯ ಎಂಜಿನಿಯರ್ ಹಣಮಂತ್ರಾಯ ಡಿ. ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ.

 

ಮಲ್ಲಟ ಗ್ರಾಮದ ಶಾಂಭವಿ ದಮ್ ಬಿರಿಯಾನಿ ದಾಬಾಗೆ ಲಿಂಗಸುಗೂರು ರಸ್ತೆಯ ಸ್ಥಾವರದಿಂದ ಅನಧಿಕೃತವಾಗಿ 25 ಕೆವಿಎ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಮಾಪಕ ಅಳವಡಿಸಿ ಕಂಪನಿಗೆ ₹1.46 ಲಕ್ಷ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ಜೆಸ್ಕಾಂ ಜಾಗೃತದಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ, ಜೆಸ್ಕಾಂ ಬಳ್ಳಾರಿ ಅಧೀಕ್ಷಕ ಅಭಿಯಂತರ ಹಾಗೂ ಶಿಸ್ತು ಪ್ರಾಧಿಕಾರಿ ಬಿ.ವೆಂಕಟೇಶಲು ಅವರು ತಕ್ಷಣ ಜಾರಿಗೆ ಬರುವಂತೆ ಬುಧವಾರ ಅಮಾನತು ಆದೇಶ ನೀಡಿದ್ದಾರೆ.


Spread the love

About Laxminews 24x7

Check Also

ರಾಜ್ಯ ಸಭಾ ಸದಸ್ಯರಾದ ಶ್ರೀ ಈರಣ್ಣಾ ಕಡಾಡಿ ಇವರ ಅನುದಾನದಲ್ಲಿ ಆಧುನಿಕವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣ

Spread the love ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬರುವ ಕಲ್ಲೆಹೋಳ ಗ್ರಾಮದಲ್ಲಿ ರಾಜ್ಯ ಸಭಾ ಸದಸ್ಯರಾದ ಶ್ರೀ ಈರಣ್ಣಾ ಕಡಾಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ