Breaking News

ಪೊಲೀಸ್ ಮನೆಗೇ ಹೊಕ್ಕ ಕಳ್ಳರು; ಪರಾರಿ ಆಗುವಾಗ ಅಡ್ಡಬಂದ ಎಎಸ್​ಐ ಪುತ್ರನಿಗೆ ಗುಂಡೇಟು..

Spread the love

ಪೊಲೀಸೊಬ್ಬರ ಮನೆ ಮೇಲೆಯೇ ಕಳ್ಳರು ದಾಳಿ ಮಾಡಿದ್ದು, ಅಡ್ಡ ಬಂದ ಎಎಸ್​​ಐ ಹಾಗೂ ಅವರ ಪುತ್ರನತ್ತ ಶೂಟ್ ಮಾಡಿದ್ದು, ಎಎಸ್​​ಐ ಪುತ್ರ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದಲ್ಲಿ ಎಎಸ್​​ಐ ನಾರಾಯಣಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ.

ಇವರು ಬಾಗೇಪಲ್ಲಿ ಠಾಣೆಯಲ್ಲಿ ಎಎಸ್​ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮನೆಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ ಎಎಸ್‌ಐ ಪತ್ನಿ ಹಾಗೂ ಸೊಸೆಗೆ ಬೆದರಿಸಿ ಮಾಂಗಲ್ಯ ಸರ ದೋಚಿದ್ದಾರೆ. ಅಲ್ಲದೆ ನಗದು-ಚಿನ್ನಾಭರಣ ಸುಲಿಗೆ ಮಾಡಿಕೊಂಡು ಪರಾರಿಯಾಗಲು ಮುಂದಾಗಿದ್ದರು.

ಅದೇ ಸಮಯಕ್ಕೆ ಹೊರಗಡೆಯಿಂದ ಎಎಸ್​​ಐ ಹಾಗೂ ಪುತ್ರ ಮನೆಗೆ ಬಂದಿದ್ದು, ಕಳ್ಳರನ್ನು ತಡೆದು ಹಿಡಿಯಲು ಯತ್ನಿಸಿದ್ದರು. ಆಗ ಇವರತ್ತ ಕಳ್ಳರು ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ನಾರಾಯಣಸ್ವಾಮಿ ಅವರ ಪುತ್ರ ಶರತ್​ಗೆ ಗುಂಡೇಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. 


Spread the love

About Laxminews 24x7

Check Also

ಸುಗಮ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆ ಎರಡನೇ ಲೂಪ್ ಉದ್ಘಾಟಿಸಿದ ಡಿಸಿಎಂ ಡಿಕೆಶಿ

Spread the loveಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.‌ ಆ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ