Breaking News

ವೇದಾವತಿ ನದಿ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗಿದ ಸಚಿವ ಶ್ರೀರಾಮುಲು

Spread the love

ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಕಾರ್ಯ ತ್ವರಿತವಾಗಿ ನಡೆಯಬೇಕೆಂದು ನಿನ್ನೆ ರಾತ್ರಿ ಸಚಿವ ಶ್ರೀರಾಮುಲು ನದಿ ಪಕ್ಕದಲ್ಲೇ ವಾಸ್ತವ್ಯ ಹೂಡಿದರು.

ಬಳ್ಳಾರಿ: ತಾಲೂಕಿನ ಬಿ ಡಿ ಹಳ್ಳಿ ಬಳಿಯ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲು ಸೇತುವೆಯ ಎಲ್‍ಎಲ್‍ಸಿ ಕಾಲುವೆಯ ದುರಸ್ತಿ ಕೆಲಸ ನಡೆಯುತ್ತಿದೆ.

ಈ ಕಾಮಗಾರಿಗೆ ವೇಗ ಸಿಗಲೆಂದು ಮಂಗಳವಾರ ರಾತ್ರಿ ನದಿ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗುವ ಮೂಲಕ ಸಚಿವ ಶ್ರೀರಾಮುಲು ಗಮನ ಸೆಳೆದರು.

 

ಭದ್ರಾ ನದಿ ಮತ್ತು ವಾಣಿವಿಲಾಸ ಸಾಗರ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ಸುಮಾರು 1 ಲಕ್ಷ ಕ್ಯೂಸೆಕ್ ನೀರನ್ನು ವೇದಾವತಿ ನದಿಗೆ ಹರಿಸಲಾಗಿದೆ. ಕರ್ನಾಟಕ ಮತ್ತು ಆಂಧ್ರ ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹಳೆಯ ಸೇತುವೆಯಲ್ಲಿ ಒಟ್ಟು 58 ಪಿಲ್ಲರ್​ಗಳಿದ್ದು, 10ನೇ ಪಿಲ್ಲರ್ ದುರಸ್ತಿಗೊಂಡಿದೆ. 15ನೇ ಪಿಲ್ಲರ್ ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಎಲ್‍ಎಲ್‍ಸಿ ಕಾಲುವೆ ದುರಸ್ತಿಗೆ ಒಳಗಾಗಿದ್ದು, ರೈತರ ಬೆಳೆಗಳಿಗೆ ನೀರು ಒದಗಿಸಲು ಈಗ ತಾತ್ಕಾಲಿಕವಾದ ಪಿಲ್ಲರ್ ನಿರ್ಮಾಣ ಮಾಡಲಾಗುತ್ತಿದೆ.

 

ವೇದಾವತಿ ನದಿ ಬಳಿ ಸಚಿವ ಶ್ರೀರಾಮುಲು ವಾಸ್ತವ್ಯ

 

ಕಾಲುವೆಯ ಮೂಲಕ ತಮ್ಮ ಜಮೀನುಗಳಿಗೆ ನೀರು ಪಡೆಯುವ ರೈತರು, ಲಕ್ಷಾಂತರ ಎಕರೆ ಬೆಳೆ ಹಾನಿಗೀಡಾಗುವ ಭೀತಿಯಲ್ಲಿದ್ದಾರೆ. ಹೀಗಾಗಿ, ಈ ಕಾಲುವೆ ರಿಪೇರಿ ತುರ್ತಾಗಿ ನಡೆಯಬೇಕು, ಕಾಮಗಾರಿ ಪೂರ್ಣಗೊಂಡ ನಂತರವೇ ಸ್ಥಳದಿಂದ ನಾನು ತೆರಳುವುದು, ಅಲ್ಲಿವರೆಗೆ ಇಲ್ಲಿಯೇ ಮೊಕ್ಕಾಂ ಹೂಡುವುದಾಗಿ ತಿಳಿಸಿದ ಸಚಿವ ಶ್ರೀರಾಮುಲು, ಸ್ಥಳದಲ್ಲೇ ರಾತ್ರಿ ನಿದ್ರೆಗೆ ಜಾರಿದರು.

ಕಾಮಗಾರಿ ಸ್ಥಳದಲ್ಲಿ ಸಚಿವರ ಬೆಂಬಲಿಗರು, ಪೊಲೀಸ್ ಸಿಬ್ಬಂದಿ, ಗುತ್ತಿಗೆದಾರರು, ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದಾರೆ.


Spread the love

About Laxminews 24x7

Check Also

ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!!

Spread the love ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!! ಗಣೇಶೋತ್ಸವ ಕೇವಲ ಎಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ