ಬೆಳಗಾವಿಯನ್ನು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ, ಸಹಕಾರ ನೀಡಲಾಗುವುದು” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ಕಾಕತಿ ಗ್ರಾಮದ ಹೆಮ್ಮೆಯ ಪುತ್ರ ಸಂಭಾಜಿ ಪರಮೋಜಿ ಮುಕ್ತ ರಾಷ್ಟ್ರೀಯ ನಾಗಾ ಕುಸ್ತಿ ಚಾಂಪಿಯನ್‌ಶಿಪ್ ಗೆ ಆಯ್ಕೆಯಾಗಿದ್ದು, ನಾಗಾಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಇವರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ೨೫ ಸಾವಿರ ರೂ. ಆರ್ಥಿಕ ಸಹಾಯ ನೀಡಿ, ಸನ್ಮಾನಿಸಿ ಶುಭಹಾರೈಸಿದರು. ವಿದ್ಯಾರ್ಥಿಗಳ ಏಳಿಗೆಗಾಗಿ ಯಮಕನಮರಡಿ ಮತಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರು ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.ಅದರ , ಸದುಪಯೋಗ ಪಡೆದುಕೊಂಡು ಬೆಳಗಾವಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಬೇಕು ಎಂದರು. ಇದೇ ವೇಳೆ ರಾಷ್ಟ್ರೀಯ ಕ್ರೀಡಾಪಟು ಸಪ್ನಿಲ್ ರಾಜು ಪಾಟೀಲ ಅವರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ೧೦ ಸಾವಿರ ರೂ. ಆರ್ಥಿಕ ಸಹಾಯ ನೀಡಿ, ಸನ್ಮಾನಿಸಿ ಶುಭಹಾರೈಸಿದರು. ಕುಸ್ತಿಪಟು ತರಬೇತಿ ನೀಡಿದ ನುರಿತ ತಜ್ಞರಾದ ಜಯವಂತ ನೀಲಜಕರ್, ಅಶೋಕ ಪಾಟೀಲ, ವಿನಾಯಕ ಕೇಸರಕರ್ ಮೂವರಿಗೆ ತಲಾ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಯಿತು.