ಚಿಕ್ಕೋಡಿ: ಕಳೆದ ನಾಲ್ಕು ಹಿಂದೆ ವೃದ್ಧೆಯನ್ನು (OldWoman) ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಪ್ರತಿಭಟನೆ (Protest) ನಡೆಸಿದರು.
ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಬೇವನೂರು ಗ್ರಾಮದಲ್ಲಿ ಬೇವನೂರು ಗ್ರಾಮದ ಫುಲಾಭಾಯಿ ಲಕ್ಷ್ಮಣ ಯಮಗಾರ(65)ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಬಾಯಿಗೆ ಬಟ್ಟೆ ಹಾಕಿ ಕಿರುಚದಂತೆ ಮಾಡಿ ಕೊಲೆ ಮಾಡಿ ಮೈಮೇಲಿದ್ದ ಆಭರಣಗಳನ್ನು ದೋಚಿ ಗುಂಪೊಂದು ಪರಾರಿಯಾಗಿತ್ತು.ಸದ್ಯ ಅಥಣಿ ಪೊಲೀಸರು ಪ್ರಕರಣಕ್ಕೆ ಸಂಬಧಿಸಿದಂತೆ ಅದೇ ಗ್ರಾಮದ ಸಂಘರ್ಷ ಕಾಂಬಳೆ ಎಂಬಾತನನ್ನು ಬಂಧಿಸಿದ್ದಾರೆ. ಸಂಘರ್ಷ ಕಾಂಬಳೆ ಬಂಧನವಾಗುತ್ತಿದ್ದಂತೆ ಬೇವನೂರು ಗ್ರಾಮದ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ.