Home / ಜಿಲ್ಲೆ / ಬೆಳಗಾವಿ / ಕಾರ್ಮಿಕ ಕಾರ್ಡ ಬಸ್‍ಪಾಸ್‍ಗಾಗಿವಿತರಣೆ ವಿಳಂಬ ,ಕಾರ್ಮಿಕ ಇಲಾಖೆಗೆ ಮುತ್ತಿಗೆ ಹಾಕಿದ ಕಾರ್ಮಿಕರು

ಕಾರ್ಮಿಕ ಕಾರ್ಡ ಬಸ್‍ಪಾಸ್‍ಗಾಗಿವಿತರಣೆ ವಿಳಂಬ ,ಕಾರ್ಮಿಕ ಇಲಾಖೆಗೆ ಮುತ್ತಿಗೆ ಹಾಕಿದ ಕಾರ್ಮಿಕರು

Spread the love

ಕಾರ್ಮಿಕ ಕಾರ್ಡ ವಿತರಣೆ ಮಾಡಲು ವಿಳಂಬ ಹಾಗೂ ಕಾರ್ಮಿಕ ಕಾರ್ಡ ಇದ್ದವರಿಗೆ ಸರ್ಕಾರದ ಸೌಲಭ್ಯಗಳು ದೊರಕದ ಹಿನ್ನೆಲೆ ಬೆಳಗಾವಿಯಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಹೌದು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಕಟ್ಟಡ ಕಾರ್ಮಿಕರು ಶುಕ್ರವಾರ ಬೆಳಗಾವಿಯ ಕಾರ್ಮಿಕ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಾರ್ಮಿಕರ ಕಾರ್ಡಗಾಗಿ ಅರ್ಜಿ ಹಾಕಿದ್ರೂ ಬೇಗನೇ ಕಾರ್ಡಗಳು ಸಿಗುತ್ತಿಲ್ಲ. ಇನ್ನು ಕಾರ್ಡಗಳು ಇದ್ದವರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ. ಶಿಕ್ಷಣ ಸೌಲಭ್ಯ, ಮದುವೆಗೆ ಸಹಾಯಧನ, ಬಸ್‍ಪಾಸ್, ಕಿಟ್‍ಗಳು ಸೇರಿ ಯಾವುದೇ ಸಹಾಯಧನ ಸಿಗುತ್ತಿಲ್ಲ ಎಂದು ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ಆರ್.ಲಾತೂರ್ ಬೆಳಗಾವಿ ಜಿಲ್ಲೆಯಲ್ಲಿ 2ಲಕ್ಷಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿ ಕಾರ್ಡ ಪಡೆದಿದ್ದಾರೆ. ಕಾರ್ಮಿಕರಿಗೆ ಬಸ್‍ಪಾಸ್ ನೀಡುತ್ತೇವೆ ಎಂದು ಕಾರ್ಮಿಕ ಇಲಾಖೆ ಕಳೆದ ತಿಂಗಳು ಆದೇಶ ಹೊರಡಿಸಿತ್ತು. ಆದರೆ ಈಗ ಆ ವೆಬ್‍ಸೈಟ್ ಬಂದ್ ಮಾಡಿದ್ದಾರೆ. ತಕ್ಷಣವೇ ಬಸ್ ಪಾಸ್ ವಿತರಣೆ ಪ್ರಾರಂಭಿಸಬೇಕು.

ಜಿಲ್ಲೆಯ ಎಲ್ಲ ಕಾರ್ಮಿಕರಿಗೂ ಬಸ್‍ಪಾಸ್ ವಿತರಿಸಬೇಕು. ಕಳೆದ ವರ್ಷ ಯಶಸ್ವಿನಿ ಪೋರ್ಟನಲ್ಲಿ ಅರ್ಜಿ ಹಾಕಿದ್ದ ಶೇ.70ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಶಿಷ್ಯವೇತನ ಸಿಕ್ಕಿತ್ತು. ಎಲ್ಲರಿಗೂ ಕೂಡ ಶಿಷ್ಯವೇತನ ವಿತರಿಸಬೇಕು. ಅದೇ ರೀತಿ ಕಟ್ಟಡ ಕಾರ್ಮಿಕ ಮಕ್ಕಳಿಗೆ ಲ್ಯಾಪ್‍ಟಾಪ್ ವಿತರಿಸಬೇಕು. ಮದುವೆ ಸಹಾಯಧನ ಕೂಡ ನೀಡಿಲ್ಲ. ಇನ್ನು ಕೋವಿಡ್‍ನಿಂದ ಮೃತರಾದ ಕಾರ್ಮಿಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ