Breaking News
Home / ಜಿಲ್ಲೆ / ಚಿತ್ರದುರ್ಗ / ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ: ಫೋನ್‌ ಸಂಭಾಷಣೆಯ ಆಡಿಯೊ ವೈರಲ್‌

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ: ಫೋನ್‌ ಸಂಭಾಷಣೆಯ ಆಡಿಯೊ ವೈರಲ್‌

Spread the love

ಚಿತ್ರದುರ್ಗ: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾಶ್ರೀ ಬಂಧನಕ್ಕೆ ಒಳಗಾಗಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ರಾಣಿ ಸತೀಶ್‌ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ ನಡುವೆ ನಡೆದ ಫೋನ್‌ ಸಂಭಾಷಣೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

ಸುಮಾರು 12 ನಿಮಿಷದ ಮಾತುಕತೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆಕ್ರೋಶ, ಯಡಿಯೂರಪ್ಪ ಸೇರಿದಂತೆ ಇತರ ರಾಜಕಾರಣಿಗಳು ಮಠದಲ್ಲಿಟ್ಟ ಹಣದ ಬಗ್ಗೆಯೂ ಪ್ರಸ್ತಾಪವಾಗಿದೆ.

‘ಮುರುಘಾಶ್ರೀ ಪ್ರಕರಣ ಅಸಹ್ಯ ಮೂಡಿಸಿದೆ. ಜೈಲಿನಲ್ಲಿದ್ದರೂ ಮಠ ಇನ್ನೂ ಅವರ ಹಿಡಿತದಲ್ಲಿದೆ. ಭಯ, ಲಜ್ಜೆ ಇಲ್ಲದ ವರ್ತನೆ ಇದು. ವೀರಶೈವರಿಂದ ಮಠ ಕೈತಪ್ಪುವ ಆತಂಕ ಎದುರಾಗಿದೆ. ವೀರಶೈವ ಲಿಂಗಾಯತ ಮಹಾಸಭಾ ಈ ಸಂಬಂಧ ಧ್ವನಿ ಎತ್ತಬೇಕು.
ಮಠಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಬೇಕಿದೆ’ ಎಂದು ರಾಣಿ ಸತೀಶ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಆಡಿಯೊ ಸಂಭಾಷಣೆಯು ರಾಣಿ ಸತೀಶ್‌ ಹಾಗೂ ತಮ್ಮ ನಡುವೆ ನಡೆದಿರುವುದೇ ಆಗಿದೆ ಎಂದು ಮಹಡಿ ಶಿವಮೂರ್ತಿ ಖಚಿತಪಡಿಸಿದ್ದಾರೆ.


Spread the love

About Laxminews 24x7

Check Also

ವರದಿ ನಂತರ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕದ ನಿರ್ಧಾರ: ಸಿಎಂ

Spread the love ಚಿತ್ರದುರ್ಗ, ನವೆಂಬರ್ 08: ”ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು ಅರ್ಜಿ ಸಲ್ಲಿಕೆಯಾಗಿವೆ. ಕಂದಾಯ ಇಲಾಖೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ