ಎರಡು ಎಟಿಎಂಗಳಲ್ಲಿ ಕಳ್ಳರು ಕೈಚಳಕ ತೋರಿರುವ ಘಟನೆ ವಿಜಯಪುರ ನಗರದ ಖಾಜಾ ಅಮೀನ್ ದರ್ಗಾ ಬಳಿ ಘಟನೆ ನಡೆದಿದೆ.
ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಎಟಿಎಂಗಳಲ್ಲಿ ಕಳ್ಳರು ಎಟಿಎಂಗಳನ್ನು ಒಡೆದು ಹಣ ಕಳ್ಳತನಕ್ಕೆ ಯತ್ನಿಸಿದ್ದಾರೆ. ಎರಡು ಎಟಿಎಂಗಳು ಅಕ್ಕಪಕ್ಕದಿವೆ.
ಆದ್ರೇ, ಎಟಿಎಂನಲ್ಲಿ ಎಷ್ಟು ಹಣ ಕಳ್ಳತನ ಆಗಿದೆ ಎನ್ನುವುದು ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ಇನ್ನೂ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಆದರ್ಶನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.