Breaking News

ಗೃಹ ಇಲಾಖೆ ಏನು ಮಾಡುತ್ತಿತ್ತು? ಪೇ ಸಿಎಂ ವಿಚಾರಕ್ಕೆ ಅರುಣ್ ಸಿಂಗ್​ ಫುಲ್ ಗರಂ

Spread the love

ಬೆಂಗಳೂರು: ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ, ಇತ್ತೀಚೆಗೆ ‘ಪೇ ಸಿಎಂ’ ಎಂಬ ಅಭಿಯಾನ ಮಾಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೋ ಹಾಗೂ ಕ್ಯೂಆರ್​ ಕೋಡ್​ ಪ್ರಕಟಿಸಿ ನಗರದ ವಿವಿಧ ಭಾಗಗಳಲ್ಲಿ ಪೋಸ್ಟರ್​ ಅಂಟಿಸಿತ್ತು.

 

ಕಾಂಗ್ರೆಸ್​​ ಮಾಡಿದ ಪೇ ಸಿಎಂ ಅಭಿಯಾನ ರಾಜ್ಯದಲ್ಲಿ ಸಂಚಲನವನ್ನೇ ಎಬ್ಬಿಸಿತ್ತು. ಬೆಂಗಳೂರಿನಲ್ಲಿ ಆರಂಭವಾದ ಕ್ಯಾಂಪೇನ್​, ರಾಜ್ಯದ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೇ ಸಿಎಂ ಅಭಿಯಾನ ಮಾಡಿ, ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು.

ಕಳೆದ ತಿಂಗಳು ಮುಕ್ತಾಯವಾದ ಅಧಿವೇಶನದಲ್ಲೂ ಪೇ ಸಿಎಂ ವಿಚಾರವಾಗಿ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ಕಾಂಗ್ರೆಸ್​ನ ಈ ಅಭಿಯಾನ ಬಿಜೆಪಿ ಸರ್ಕಾರಕ್ಕೆ ಹಾಗೂ ಸಿಎಂ ಬೊಮ್ಮಾಯಿ ಅವರಿಗೆ ತೀವ್ರ ಮುಜುಗರ ತಂದಿತ್ತು.

ಇದೀಗ ಕಾಂಗ್ರೆಸ್​ನ ಪೇ ಸಿಎಂ ಅಭಿಯಾನ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಪೋಸ್ಟರ್​ ಅಂಟಿಸುವವರೆಗೆ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಇಂತಹ ಕೃತ್ಯಕ್ಕೆ ಅವಕಾಶ ಮಾಡಿಕೊಡಬಾರದಿತ್ತು. ಪೇ ಸಿಎಂ ಅಭಿಯಾನದಿಂದ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗರಂ ಆಗಿದ್ದಾರೆ.


Spread the love

About Laxminews 24x7

Check Also

20ನೇ ವಯಸ್ಸಿಗೆ ಭಾರತಕ್ಕೆ ಬಂದು ಗಂಗಾವತಿಯಲ್ಲೇ ನೆಲೆಸಿದ್ದ ಬೆಲ್ಜಿಯಂ ಮಹಿಳೆ ಸಾವು

Spread the loveಗಂಗಾವತಿ: ಪ್ರವಾಸಕ್ಕೆಂದು ಬಂದು ಇಲ್ಲಿನ ಪ್ರಕೃತಿಗೆ ಮಾರುಹೋಗಿ ಕಳೆದ ಹಲವು ದಶಕದಿಂದ ಇಲ್ಲೇ ಒಂಟಿಯಾಗಿ ಬದುಕು ನಡೆಸುತ್ತಿದ್ದ ಬೆಲ್ಜಿಯಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ