Breaking News

ಹೆಣ್ಣು ಆಡು ಹಾಲು ಕೊಡುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದರೆ ಗಂಡು ಮೇಕೆ ಕೊಡುತ್ತೆ ಹಾಲು

Spread the love

ಹೆಣ್ಣು ಆಡು ಹಾಲು ಕೊಡುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದರೆ ಗಂಡು ಆಡು ಕೂಡ ಹಾಲು ಕೊಡುತ್ತೆ ಎನ್ನುವುದಕ್ಕೆ ಇಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಹೌದು ಜಮಖಂಡಿನಗರದ ಟೀಚರ್ಸ್ ಕಾಲೋನಿಯಲ್ಲಿ ಗಂಡು ಆಡಿನ ಮರಿ ಹಾಲು ಕೊಡುತ್ತಿರುವುದು ಕಂಡು ಸಾರ್ವಜನಿಕರು ತೀವ್ರ ಅಚ್ಚರಿಗೊಂಡಿದ್ದಾರೆ. ಪರಶುರಾಮ ಭಜಂತ್ರಿ ಎನ್ನುವವರಿಗೆ ಸೇರಿದ ಮೂರು ವರ್ಷದ ಗಂಡು ಮೇಕೆ ಇದಾಗಿದ್ದು. ಪ್ರತಿ ನಿತ್ಯ ಒಂದು ಬಟ್ಟಲಿನಷ್ಟು ಹಾಲನ್ನು ಈ ಗಂಡು ಮೇಕೆ ಕೊಡುತ್ತಿದೆ. ಕುರಿಗಾಹಿಯಾಗಿರುವ ಪರಶುರಾಮ ಭಜಂತ್ರಿ ಬಳಿ ಸಾಕಷ್ಟು ಕುರಿಗಳು, ಆಡುಗಳು ಇವೆ. ಆದರೆ ಈ ಗಂಡು ಮೇಕೆ ಮಾತ್ರ ಹಾಲು ಕೊಡುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಪ್ರಕೃತಿ ವಿಸ್ಮಯಕ್ಕೆ ಎಲ್ಲರೂ ಸೋಜಿಗ ಎನ್ನುವುದಕ್ಕೆ ಈ ನಿದರ್ಶನ ಹೇಳಿ ಮಾಡಿಸಿದಂತಿದೆ. ಸಧ್ಯ ಜಮಖಂಡಿಯ ಗಂಡು ಮೇಕೆ ಹಾಲು ಕರೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

 

ಈ ಬಗ್ಗೆ ಆಡಿನ ಮಾಲೀಕ ಪರಶುರಾಮ ಭಜಂತ್ರಿಯ ಸ್ನೇಹಿತ ಹಣಮಂತ ಗೊಲ್ಲರ ಮಾಹಿತಿ ನೀಡಿದ್ದು ನಾವಿಬ್ಬರೂ ಕೂಡಿ ಕುರಿ ಕಾಯುತ್ತೇವೆ. ಕಳೆದ ಮೂರು ವರ್ಷಗಳಿಂದ ಪ್ರತಿದಿನ ಒಂದು ಬಟ್ಟಲಷ್ಟು ಈ ಗಂಡು ಮೇಕೆ ಹಾಲು ಕೊಡುತ್ತಿದೆ. ಇದನ್ನು ನೋಡಿ ನಮಗೆ ಬಹಳಷ್ಟು ವಿಚಿತ್ರವಾಗಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಗಂಡು ಮೇಕೆ ಹಾಲು ಕೊಡುತ್ತಿರುವುದು ನಿಜಕ್ಕೂ ಎಲ್ಲರನ್ನೂ ಬೆರಗುಗೊಳಿಸಿದ್ದು, ಎಲ್ಲರೂ ಇದೆನಪ್ಪಾ ವಿಚಿತ್ರ ಎನ್ನುತ್ತಿದ್ದಾರೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ