ಅದ್ದೂರಿಯಾಗಿ ನೆನವೆರಿತು ಬೀಷ್ಠಾದೇವಿ ಜಾತ್ರಾ ಮಹೋತ್ಸವ..!!
ಬೆಳಗಾವಿ : ವಿಜಯದಶಮಿ ದಿನ ಬೆಳಗಾವಿಯ ಬುರುಡ ಗಲ್ಲಿಯಲ್ಲಿ ಆಯೋಸಿದ್ದ ಭಿಷ್ಠಾದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೆರಿತು.ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ಬೆಳಗಾವಿ ನಗರದಲ್ಲೇ ಅತಿ ವಿಜೃಂಭಣೆಯಿಂದ ಆಚರಿಸುವ ಶ್ರೀ ಭಿಷ್ಠಾದೇವಿ ದಸರಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಕೋರೊನಾ ಕಾಲದಲ್ಲಿ ಸರಳವಾಗಿ ಆಚರಿಸಲ್ಪಟ್ಟಿದ್ದರಿಂದ ಈ ವರ್ಷ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ಕೈಗೊಳ್ಳಲಾಗಿತ್ತು.ನವರಾತ್ರಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿಸಿ ವಿಜಯದಶಮಿ ದಿನ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ,ಬೆಳಗಾವಿ ನಗರ ಅಪರಾಧ ವಿಭಾಗದ ಎಸಿಪಿ ಎಸ್.ಆರ್.ಕಟ್ಟಿಮನಿ ಹಾಗೂ ನವಜೀವನ ಆಸ್ಪತ್ರೆಯ ವೈದ್ಯರಾದ ಡಾ.ಸತೀಶ ಚೌಲಿಗಾರ ಆಗಮಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತಾನಾಡಿದ ಶಾಸಕ ಅನಿಲ ಬೆನಕೆ ಅವರು ಜಾತ್ರಾ ಮಹೋತ್ಸವ ದಂತ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದ್ರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಮುಖ್ಯವಾಗಿ ನಮ್ಮ ಸಂಸ್ಕೃತಿ ರಕ್ಷ ಣೆಯಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಯುವಕರು ತಮ್ಮ ಶಿಕ್ಷಣದ ಜೊತೆ ಸಂಸ್ಕೃತಿ ರಕ್ಷಣೆ ಮಾಡಬೇಕೆಂದರು.
ನಂತರ ಮಾತನಾಡಿದ ಎಸಿಪಿ ಎಸ್.ಆರ್.ಕಟ್ಟಿಮನಿ ಅವ್ರು ಬೆಳಗಾವಿ ನಗರ ಬೆಳಗಾವಿ ನಗರ ವೈವಿಧ್ಯತೆಯಲ್ಲಿ ಏಕತೆ ಕಾಣುವ ನಗರವಾಗಿದೆ.ಸಾಕಷ್ಟು ಆಚರಣೆಗಳು ಬೆಳಗಾವಿಯಲ್ಲಿ ಕಂಡು ಬರುತ್ತವೆ.ದುರ್ಗಾಮಾತಾ ದೌಡದಲ್ಲಿ ನಮ್ಮ ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಭಾಗವಿಸುವುದರಿಂದ ಹಿತ ಅನಿಸುತ್ತದೆ.ಸಾಕಷ್ಟು ಯುವಕರು ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಅತ್ಯುನ್ನತ ಶಿಕ್ಷಣ ಪಡೆಯುವುದ್ರಲ್ಲಿ ಪ್ರಾಮುಖ್ಯತೆ ಕೊಡಬೇಕೆಂದರು.
ಮುಖ್ಯ ಅತಿಥಿಗಳು ಮಾತನಾಡಿದ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.ಮೇದಾರ ಸಮಾಜದಲ್ಲಿನಿಸ್ವಾರ್ಥ ಸೇವೆ ಸಲ್ಲಿಸಿದ ಪರಶುರಾಮ ಸಾಳುಂಕೆ,ವೈದ್ಯಕೀಯ ಕ್ಷೇತ್ರದಲ್ಲಿ ಹೆಗ್ಗಳಿಕೆ ಗಳಿಸಿದ ಮಾರುತಿ ಮೇದಾರ ಹಾಗೂ ಕ್ರೀಡೆಯಲ್ಲಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಮಾಡಿದ ಅಭೀಷೆಕ ನವಲೆ ಯವರ ಸಾಧನೆಯನ್ನು ಗುರುತಿಸಿ ಈ ವರ್ಷ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ ಮಾಡಲಾಯಿತು.ನಂತರ ಮಹಾಪ್ರಸಾದಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಮೇದಾರ ಸಮಾಜದ ಅಧ್ಯಕ್ಷರಾದ ಪ್ರಕಾಶ ನೇಸರಿಕರ,ಜಾತ್ರಾ ಕಮೀಟಿ ಅಧ್ಯಕ್ಷರಾದ ಲಕ್ಷ್ಮಣ ಬುರುಡ,ಅಜಿತ ಮಾದರ,ಪ್ರಸಾದ ದೇವರಮನಿ,ರಾಮಚಂದ್ರ ಪೂಜಾರಿ,ಗೌತಮ್ ಲೊಂಡೆ,ಅಕೀಲ್ ಪೆಟ್ಕರ್,ರಾಘವೇಂದ್ರ ಮಡಿವಾಳರ,ಮಲ್ಲೇಶಿ ಕೊರಡೆ,ಆನಂದ ಮೇದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.