ಗೋಕಾಕ : ಗೋಕಾಕ ನಗರದ ಕಿಲ್ಲಾ ಪ್ರದೇಶದಲ್ಲಿ ಬೇರೊಬ್ಬರ ಮನೆಯ ಗ್ಯಾಲರಿಯಲ್ಲಿ ಮಹಿಳೆಯೋರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಶವವಾಗಿ ಪತ್ತೆಯಾಗಿರುವ ಮಹಿಳೆಯನ್ನು ಮರಾಠಾಗಲ್ಲಿಯ ನಿವಾಸಿಯಾದ ಜಭೀನಾ ಮುಲ್ಲಾ (40) ಎಂದು ಗುರುತಿಸಲಾಗಿದೆ.
ಗೋಕಾಕ ನಗರದ ಕಿಲ್ಲಾದಲ್ಲಿರುವ ಕಿರಣ್ ದೀಕ್ಷಿತ್ ಎಂಬುವವರ ಮನೆಯ ಮುಂದಿನ ಗ್ಯಾಲರಿಯಲ್ಲಿ ಮೃತದೇಹ ನೇತಾಡುತ್ತಿತ್ತು. ಮನೆ ರಸ್ತೆ ಪಕ್ಕದಲ್ಲಿರುವುದರಿಂದ ಈ ದೃಶ್ಯ ಕಂಡು ವಾಕಿಂಗ್ ಹೋಗುತ್ತಿದ್ದವರು ಬೆಚ್ಚಿಬಿದ್ದಿದ್ದಾರೆ.
ಕೆಲವು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಕಿರಣ್ ದೀಕ್ಷಿತ್ ಹಾಗೂ ಕುಟುಂಬಸ್ಥರು ಬೇರೆಡೆ ತೆರಳಿತ್ತು. ಹೀಗಾಗಿ ಆ ಮನೆಯಲ್ಲಿ ಯಾರೂ ಇಲ್ಲದಿರುವದನ್ನು ಗಮನಿಸಿದ್ದ ಜಭೀನಾ ಆ ಮನೆಯ ಗ್ಯಾಲರಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಇನ್ನೂ ಮಹಿಳೆಯ ನಿಗೂಢ ಸಾವಿಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಗೋಕಾಕ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
https://fb.watch/fQ_MBVYhIy/
Laxmi News 24×7