ಬೆಂಗಳೂರು: ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಆರೋಗ್ಯ ಇಲಾಖೆ 108 ಆಂಬುಲೆನ್ಸ್ ಸೇವೆ ಬಂದ್ ಆಗಿದೆ ಎಂಬ ಮಾತು ಕೇಳಿಬರುತ್ತಿವೆ. ತಾಂತ್ರಿಕ ದೋಷದಿಂದಾಗಿ 108 ಗೆ ಕರೆ ಮಾಡಿದರೂ ಯಾರೂ ಸಹ ಕರೆ ಸ್ವೀಕರಿಸುತ್ತಿಲ್ಲ. ಹಾಗಾಗಿ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವುಂಟಾಗಿದೆ ಎಂದು ತಿಳಿದುಬಂದಿದೆ.
ಜಿವಿಕೆ ಏಜನ್ಸಿ ಮೂಲಕ 108 ಆಂಬುಲೆನ್ಸ್ ಸೇವೆ ನಡೆಯುತ್ತಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ತುರ್ತು ಸೇವೆ ಬಂದ್ ಆಗಿದೆ. ಎರಡು ದಿನಗಳಿಂದ ಈ ಸಮಸ್ಯೆಯಾಗಿದ್ದರೂ ಆರೋಗ್ಯ ಇಲಾಖೆಯಾಗಲಿ, ಸರ್ಕಾರವಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಆಂಬುಲೆನ್ಸ್ ಗೆ ಕರೆ ಮಾಡಿದರೂ ಯಾರೂ ಕರೆಗಳನ್ನೇ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
108 ಕಾಲ್ ಸೆಂಟರ್ ಗೆ ಪ್ರತಿದಿನ 9-10 ಸಾವಿರ ಕರೆಗಳು ಬರುತ್ತಿದ್ದವು ಆದರೆ ಈಗ ಕೇವಲ 2-3 ಸಾವಿರ ಕರೆಗಳನ್ನು ಮಾತ್ರ ಸಿಬ್ಬಂದಿಗಳು ಸ್ವೀಕರಿಸುತ್ತಿದ್ದಾರೆ ಎನ್ನಲಾಗಿದೆ. ಇದು ಟೆಕ್ನಿಕಲ್ ಸಮಸ್ಯೆಯೇ ಅಥವಾ ಬೇರೆಯದ್ದೇ ಕಾರಣಗಳಿವೆಯೇ ಎಂಬ ಅನುಮಾನಕೂಡ ವ್ಯಕ್ತವಾಗಿದೆ.
Laxmi News 24×7