ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬರೀ ಆಶ್ವಾಸನೆ ಕೊಟ್ಟುಕೊಂಡು ಹೋಗುತ್ತಿದ್ದಾರೆ. ಎಲ್ಲಿ ಅನುದಾನ ಹಾಕುತ್ತೇನೆ ಎಂದು ಹೇಳಿದ್ದಾರೆ ಅಲ್ಲಿ ಯಾವುದೇ ರೀತಿ ಕೆಲಸ ಆಗಿಲ್ಲ. ಹೀಗಾಗಿ ಇದರಿಂದ ಜನರಿಗೆ ಬೇಜಾರಾಗಿದೆ. ಆದ್ದರಿಂದ ನೂರಕ್ಕೆ ನೂರರಷ್ಟು ಶಾಸಕರು ಬದಲಾವಣೆ ಆಗುವುದು ನಿಶ್ಚಿತ ಎಂದು ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ್ ಜಾಧವ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ್ ಜಾಧವ1200 ಕೋಟಿ ಅನುದಾನ ತಂದಿದ್ದೇವೆ ಎಂದು ಬರೀ ಹೇಳುವುದಷ್ಟೇ ಆಗಿದೆ. ನಾವು ಬಹಳ ಕಡೆ ಸರ್ವೇ ಮಾಡುತ್ತಿದ್ದೇವೆ. ಬರುವ 8 ದಿನಗಳಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳಿಗೆ ತಿಳಿಸುತ್ತೇವೆ. ಕ್ಷೇತ್ರದ ಸಮಸ್ಯೆಗಳಿಗೆ ಉತ್ತರ ಶಾಸಕರು ಕೊಡಬೇಕು. ನಮ್ಮ ಕ್ಷೇತ್ರದಲ್ಲಿ ನಾವು ವಿರೋಧಿ ಸ್ಥಾನದಲ್ಲಿದ್ದೇವೆ. ಸಧ್ಯ ನಾವು ಕುಕಡೊಳ್ಳಿ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದೇವೆ. ಅಲ್ಲಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಕರೆದುಕೊಂಡು ಹೋಗಿ 10 ಲಕ್ಷ ರೂಪಾಯಿ ಕೆಲಸ ಮಾಡಿದ್ದೇವೆ. ಹೈಮಾಸ್ಕ್ ಮಾಡಿದ್ದೇವೆ. ಉಚಗಾಂವ ಮತ್ತು ಅತ್ತಿವಾಡದಲ್ಲಿಯೂ ಕೆಲಸ ಮಾಡಿದ್ದೇವೆ. ಆರು ತಿಂಗಳ ಹಿಂದೆ ಗ್ರಾಮೀಣ ಮಂಡಳ ಕಾರ್ಯಕರ್ತರು ಪಟ್ಟಿ ಹಾಕಿ ನಾಲ್ಕು ರಸ್ತೆಗಳನ್ನು ದುರಸ್ಥಿ ಮಾಡಿದ್ದೇವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಗ್ರಾಮೀಣ ಶಾಸಕರು ಬದಲಾವಣೆ ಆಗುತ್ತಾರೆ. ಆಗ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕೊಡುತ್ತೇವೆ ಎಂದ ಧನಂಜಯ್ ಜಾಧವ್ ತಮ್ಮ ಪಕ್ಷದ ಶಾಸಕರು ಹಿಂದಿನ ಎರಡು ಅವಧಿಯಲ್ಲಿ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಧನಂಜಯ ಜಾಧವ್ ನಿರಾಕರಿಸಿದರು.