Breaking News

ಕಾರ್ಮಿಕರನ್ನು ಕರೆತರಲು-ಕಳಿಸುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ………….

Spread the love

ಬೆಂಗಳೂರು : ಲಾಕ್ ಡೌನ್ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಸಿಲುಕಿದ್ದಾರೆ. ಬೇರೆ-ಬೇರೆ ರಾಜ್ಯಗಳಲ್ಲಿ ಕರ್ನಾಟಕದ ಕಾರ್ಮಿಕರು ಇದ್ದಾರೆ. ಅವರನ್ನು ವಾಪಸ್ ಕರೆತರುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ.

ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಲು ವಿವಿಧ ರಾಜ್ಯಗಳ ಜೊತೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಪ್ರಕ್ರಿಯೆಯನ್ನು ಇಬ್ಬರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ನೋಡಿಕೊಳ್ಳಲಿದ್ದಾರೆ.

ಕೇಂದ್ರ ಸರ್ಕಾರ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳ ಪ್ರಯಾಣಕ್ಕೆ ಅವಕಾಶ ನೀಡಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಹಲವರು ಬೇರೆ-ಬೇರೆ ರಾಜ್ಯಗಳಲ್ಲಿ ಸಿಲುಕಿದ್ದಾರೆ. ವಿವಿಧ ರಾಜ್ಯಗಳು ಈ ಪ್ರಕ್ರಿಯೆಯನ್ನು ಆರಂಭಿಸಿವೆ.

ಬೇರೆ ರಾಜ್ಯಗಳ ಕಾರ್ಮಿಕರ ಜೊತೆಗೆ ಹೊರ ರಾಜ್ಯಗಳ ವಿದ್ಯಾರ್ಥಿಗಳನ್ನು ಕೂಡ ಸುರಕ್ಷಿತವಾಗಿ ಅವರ ಊರಿಗೆ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. 41 ದಿನಗಳ ಲಾಕ್​ಡೌನ್​ ಅವಧಿ ಮುಗಿಯಲು ಕೇವಲ 2 ದಿನ ಬಾಕಿ ಇದೆ. ಹೀಗಾಗಿ, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಪ್ರತಿರಾಜ್ಯಕ್ಕೂ ಸಂಬಂಧಿಸಿದಂತೆ ಓರ್ವ ಐಎಎಸ್‌, ಓರ್ವ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಆ ಅಧಿಕಾರಿಗಳು ಸಂಬಂಧಪಟ್ಟ ರಾಜ್ಯದ ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಮಿಕರು,‌ ವಿದ್ಯಾರ್ಥಿಗಳು, ಪ್ರವಾಸಿಗರು ತಮ್ಮ ರಾಜ್ಯಗಳಿಗೆ ತೆರಳಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಏSಖಖಿಅ, ಓಇಖಖಿಅ, ಓWಖಖಿಅ ಬಸ್​ಗಳನ್ನು ಒದಗಿಸಲಾಗುವುದು.

ಕೇಂದ್ರಾಡಳಿತ ಪ್ರದೇಶಗಳಿಗೆ ರಾಜಕುಮಾರ್ ಖತ್ರಿ -ಐಎಎಸ್‌, ಆರುಣ್ ಚಕ್ರವರ್ತಿ- ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ. ಹೊರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜುನಾಥ್ ಪ್ರಸಾದ್ -ಐಎಎಸ್‌, ಪಿ.ಎಸ್. ಸಂದು- ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ.

ನವದೆಹಲಿಗೆ ಕಪಿಲ್ ಮೋಹನ್ – ಐಎಎಸ್‌, ಪಿ ಎಸ್ ಸಂದು- ಐಪಿಎಸ್, ರಾಜಸ್ಥಾನಕ್ಕೆ ಮನೋಜ್ ಕುಮಾರ್ ಮೀನಾ- ಐಎಎಸ್‌, ರಾಮ್ ನಿವಾಸ್ ಸೆಫಟ್- ಐಪಿಎಸ್, ಉತ್ತರ ಪ್ರದೇಶಕ್ಕೆ ತುಷಾರ್ ಗಿರಿನಾಥ್- ಐಎಎಸ್‌, ಸುನೀಲ್ ಅಗರವಾಲ್- ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ.

ಬಿಹಾರಕ್ಕೆ ಅಜುಂ ಪರ್ವೇಜ್- ಐಎಎಸ್‌, ವಿಕಾಸ್ ಕುಮಾರ್ ವಿಕಾಸ್ -ಐಪಿಎಸ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಿಗೆ ಮನೋಜ್ ಜೈನ್ -ಐಎಎಸ್‌, ನಿಶಾ ಜೇಮ್ಸ್ -ಐಪಿಎಸ್, ಜಾರ್ಖಂಡ್​ಗೆ ಉಜ್ವಲ್ ಕುಮಾರ್ ಘೋಷ್- ಐಎಎಸ್‌, ಸೀಮಂತ್ ಕುಮಾರ್ ಸಿಂಗ್ -ಐಪಿಎಸ್, ಒಡಿಶಾಗೆ ಡಾ. ರವಿಶಂಕರ್ -ಐಎಎಸ್‌, ಕೆ. ರಾಮಚಂದ್ರರಾವ್ -ಐಪಿಎಸ್, ಮಹಾರಾಷ್ಟ್ರಕ್ಕೆ ಗುಂಜನ್ ಕೃಷ್ಣ -ಐಎಎಸ್‌, ಪಾಟೀಲ್ ವಿನಾಯಕ್ ವಸಂತರಾವ್ – ಐಪಿಎಸ್, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಡಾ. ಎನ್​.ವಿ. ಪ್ರಸಾದ್ -ಐಎಎಸ್‌, ಮಾಲಿನಿ ಕೃಷ್ಣಮೂರ್ತಿ – ಐಪಿಎಸ್, ತಮಿಳುನಾಡಿಗೆ ವಿ. ಪೊನ್ನುರಾಜು – ಐಎಎಸ್‌, ಹರಿಶೇಖರನ್- ಐಪಿಎಸ್, ಕೇರಳಕ್ಕೆ ಎಂ.ಟಿ. ರಾಜು -ಐಎಎಸ್‌, ಸಿಮಿ ಮರಿಯಂ ಜಾರ್ಜ್ -ಐಪಿಎಸ್ ಅವರನ್ನು ನೊಡಲ್ ಅಧಿಕಾರಿಗಳಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.

ಹೊರ ರಾಜ್ಯಗಳಲ್ಲಿ ಇರುವ ಕನ್ನಡಿಗರನ್ನು ಕರೆತರುವ ಜವಾಬ್ದಾರಿಯನ್ನು ಕೂಡ ನೊಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ. ಹಾಗೇ, ಆಯಾ ರಾಜ್ಯಗಳ ಗಡಿ ಭಾಗದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ. ಲಾಕ್ ಡೌನ್​ನಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಕೂಲಿ ಕಾರ್ಮಿಕರಿಗೆ ಪ್ರಯಾಣದ ವ್ಯವಸ್ಥೆ ಕಲ್ಪಿಸಿರುವುದರಿಂದ ಅವರೆಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

ಜೊತೆಗೆ, ಕೊಪ್ಪಳ, ಬಾಗಲಕೋಟೆ, ಯಾದಗಿರಿ, ಗುಲ್ಬರ್ಗಾ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಾರ್ಮಿಕರಿಗೆ ಮನೆಗೆ ಹೋಗಲು ನಿನ್ನೆ ರಾತ್ರಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಇಲಾಖೆಯಿಂದ ಕೆಎಸ್​ಆರ್​​ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೀದರ್ ,ಯಾದಗಿರಿಗೆ ಹೋಗಲು ಮೂವತ್ತು ಮಂದಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಮತ್ತು ಮಾಸ್ಕ್ ಕೊಟ್ಟು ಸಾಮಾಜಿಕ ಅಂತರದಲ್ಲಿ ಪ್ರಯಾಣ ಮಾಡಲು ಸೂಚಿಸಲಾಗಿದೆ. ಬೆಂಗಳೂರಿನಿಂದ ಹೊರಡುವ ಎಲ್ಲಾ ಬಸ್​ಗಳು ಮೊದಲು ಆಯಾ ಜಿಲ್ಲಾಡಳಿತ ತಲುಪಲಿದೆ. ನಂತರ ಅಲ್ಲಿಂದ ಜನ ತಮ್ಮ ಮನೆ ತಲುಪಲು ಸೂಚನೆ ನೀಡಲಾಗಿದೆ.


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ