ಬೆಳಗಾವಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ 85 ವಾಹನಗಳ ವಿರುದ್ಧ ಜಿಲ್ಲಾ ಪೊಲೀಸರು 129 ಕೇಸ್ ದಾಖಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಮೂಡಲಗಿ ತಾಲೂಕು ಸೇರಿದ್ದಂತೆ ಇತರ ಕಡೆ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ 85 ವಾಹನಗಳ ವಿರುದ್ಧ 129 ಕೇಸ್ ದಾಖಲಿಸಿ 45,800 ರೂ.ದಂಡ ವಿಧಿಸಿದ್ದಾರೆ.
ಶಾಲಾ ವಾಹನಗಳ ಚಾಲಕರು ಸಂಚಾರಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಸೀಟ್‍ಗಿಂತ ಹೆಚ್ಚಾಗಿ ಕರೆದುಕೊಂಡು ಹೋದರೆ ಅಂತಹ ವಾಹನಗಳನ್ನು ಮುಂದಿನ ದಿನಗಳಲ್ಲಿ ಜಪ್ತಿ ಮಾಡಲಾಗುವುದು ಎಂದು ಎಸ್‍ಪಿ ಡಾ.ಸಂಜೀವ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
Laxmi News 24×7