ಶತಮಾನದ ಇತಿಹಾಸ ಹೊಂದಿರುವ ಬೆಳಗಾವಿ ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಹವಾ ಜೋರಾಗಿದ್ದು. ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಫೆÇೀಟೋ ಇಟ್ಟು ಪೂಜೆ ಮಾಡಲಾಗಿದೆ.
ಹೌದು ಬೆಳಗಾವಿಯ ರಾಮತೀರ್ಥ ನಗರ, ಚನ್ನಬಸವೇಶ್ವರ ಬಡಾವಣೆಯ ಗಣೇಶೋತ್ಸವ ಮಂಡಳಿಗಳಿಂದ ವಿಘ್ನನಿವಾರಕನ ಜೊತೆಗೆ ಸಾವರ್ಕರ್‍ಗೂ ಪೂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಗಣೇಶೋತ್ಸವ ಮಂಡಳಿಗಳಿಗೆ ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್ ಸಾವರ್ಕರ್ ಭಾವಚಿತ್ರ ವಿತರಿಸಿದ್ದರು.
ಗಣೇಶೋತ್ಸವ ಮಂಟಪಗಳಲ್ಲಿ ವೀರ್ ಸಾವರ್ಕರ್ ಫೆÇೀಟೋ ಇಟ್ಟು ಹಾರ ಹಾಕಿ ಪೂಜೆ ಸಲ್ಲಿಸಲಾಗಿದೆ. ಗಣಪತಿ ಬಪ್ಪಾ ಮೋರಯಾ ಜೊತೆ ವೀರ್ ಸಾವರ್ಕರ್‍ಗೂ ಜೈಕಾರ ಹಾಕಿದ್ದು ಈ ವೇಳೆ ಕಂಡು ಬಂತು.ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ವೀರಸಾವರ್ಕರ್‍ಗೂ ಬೆಳಗಾವಿಗೂ ಅವಿನಾಭಾವ ಸಂಬಂಧ ಇದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಸಾವರ್ಕರ್ ಜೈಲುವಾಸ ಅನುಭವಿಸಿದ್ದರು.
Laxmi News 24×7