ಮೂಡಲಗಿ: ತಾಲೂಕಿನ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆಗಳ ಕಳ್ಳತನ ಪ್ರಕರಣ ದಾಖಲಾಗಿದ್ದವು. ಪ್ರಕರಣ ಬೇಧಿಸಿರುವ ಕುಲಗೋಡ ಪೊಲೀಸರು ಕಳ್ಳನನ್ನು ಬಂಧಿಸಿ 4 ತೊಲಿ 9 ಗ್ರಾಂ ಬಂಗಾರ ವಶಪಡೆಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಠಾಣಾ ವ್ಯಾಪ್ತಿಯ ತೋಕರಟ್ಟಿ ಗ್ರಾಮದ ಚನ್ನವ್ವ ಬಿರಾನಿ ಮತ್ತು ತಿಗಡಿ ಗ್ರಾಮದ ಲಕ್ಷ್ಮೀ ಹೊಸೂರ ಎಂಬುವರ ಮನೆಗಳಲ್ಲಿ ಆರೋಪಿತ ತೋಕರಟ್ಟಿ ಗ್ರಾಮದ ಸಿದ್ಧಾರೂಡ ಚಂದ್ರಪ್ಪ ತೋಕ್ಯಾಗೋಳ (ನಾಯಿಕ) ಈತ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬೀಗ ಮುರಿದು ಬಂಗಾರದ ಆಭರಣ ಕಳ್ಳತನ ಮಾಡಿದ್ದ.
ಆರೋಪಿತನಿಂದ 1 ನಕ್ಲೇಸ್, 1 ಚೈನ್ ತಾಳಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಲಗೋಡ ಪಿ.ಎಸ್.ಐ ಗಳಾದ ಜಿ.ಎಸ್ ಪಾಟೀಲ್, ಎಸ್. ಎಚ್ ಕರನಿಂಗ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಚರಣೆಯಲ್ಲಿ ಎ.ಡಿ ಕೊಪ್ಪದ. ಬಿ.ಬಿ ಬಿರಾದಾರ. ಎಮ್.ಟಿ ಬಳಿಗಾರ. ವ್ಹಿ.ಎ ದೇಸಾಯಿ, ಎಸ್.ಎಸ್ ವಜ್ರಮಟ್ಟಿ, ವ್ಹಿ.ಎಲ್ ದೂಳಪ್ಪನ್ನವರ ,ಎಮ್.ಆರ್ ಲದ್ದಿ. ಎಮ್.ಎಸ್ ಕುರೆನ್ನವರ, ಎಸ್.ಎಲ್ ಮಂಗಿ, ಎಸ್.ಪಿ ಮುಗ್ಗನ್ನವರ, ಮಾಳಪ್ಪ ಆಡಿನ ಇದ್ದರು.