ಹುಬ್ಬಳ್ಳಿ: ಇನ್ನೇನು ಹುಬ್ಬಳ್ಳಿ (Hubballi) ಶಾಂತವಾಯಿತು ಅನ್ನುವಷ್ಷರೊಳಗಾಗಿ ಏನಾದರೂ ಒಂದು ಘಟನೆಗಳು ನಡೆಯುತ್ತಲೇ ಇವೆ. ಗುರಾಯಿಸಿ ನೋಡಿದ ಅಂತ ಗ್ಯಾಂಗ್ವೊಂದು ಯುವಕನ (Youth Assault) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಬಿರಿಯಾನಿ (Biryani) ತಿನ್ನೋಕೆ ಹೋದವರು ಹಲ್ಲೆ ಮಾಡಿ ಈಗ ಕಂಬಿ ಎಣಿಸುತ್ತಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಚಾಕು ಮತ್ತು ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ನಡೆದಿದೆ.
ಬಿರಿಯಾನಿ ತೆಗೆದುಕೊಂಡು ಹೋಗಲು ಬಂದಿದ್ರು
ಇಂದಿರಾನಗರ ನಿವಾಸಿ ಯಶವಂತ್ ಭಂಡಾರಿ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಹೋಟೆಲ್ನಲ್ಲಿ ಬಿರಿಯಾನಿ ತೆಗೆದುಕೊಂಡು ಹೋಗೋಕೆ ಯಶವಂತ್ ಭಂಡಾರಿ ಬಂದಿದ್ದ. ಅದೇ ವೇಳೆ ಬಿರಿಯಾನಿ ತೆಗೆದುಕೊಂಡು ಹೋಗೋಕೆ ಸೆಟ್ಲ್ ಮೆಂಟ್ ಏರಿಯಾದ ಅಭಿಷೇಕ್ ಜಾಧವ್ ಬಂದಿದ್ದಾನೆ.ಗುರಾಯಿಸಿ ನೋಡಿದ್ದೀ ಅಂತ ಜಗಳ ಆರಂಭಿಸಿದ ಅಭಿಷೇಕ್ ಜಾಧವ್ ತಲ್ವಾರ್ ತೆಗೆದುಕೊಂಡು ಹಣೆ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಹತ್ತಕ್ಕೂ ಹೆಚ್ಚು ಸಹಚರರು ಬಾಟಲಿ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ