Breaking News

ಸಾವರ್ಕರ್ ಮೆರವಣಿಗೆ ಮಾಡಿದರೆ ನಾವು ಕಿತ್ತೂರು ಚೆನ್ನಮ್ಮ ಯಾತ್ರೆ ಮಾಡ್ತೇವೆ :ಎಂ.ಬಿ.ಪಾಟೀಲ

Spread the love

ವಿಜಯಪುರ : ಬಿಜೆಪಿ ನಾಯಕರು ವಿವಾದಿತ ಸಾವರ್ಕರ್ ಮೆರವಣಿಗೆ, ಗಣೇಶ ಉತ್ಸವದಲ್ಲಿ ಭಾವಚಿತ್ರ ವಿತರಿಸಿದರೆ, ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡ ನಾಡಿನ ಪ್ರಾಮಾಣಿಕ ಹೋರಾಟಗಾರರಾದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರದ ವೆಂಕಟಪ್ಪ ನಾಯಕರಂತ ದೇಶಪ್ರೇಮಿ ವೀರ ಹೋರಾಟಗಾರರ ರಥಯಾತ್ರೆ ನಡೆಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿರುಗೇಟು ನೀಡಲು ಮುಂದಾಗಿದ್ದಾರೆ.

 

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಅವರು ವಿವಾದಿತ ಸಾವರ್ಕರ್ ಯಾತ್ರೆಗೆ ಚಾಲನೆ ನೀಡಿದ್ದಾರೆ. ಬದಲಾಗಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಸುರಪುರದ ವೆಂಕಟಪ್ಪ ನಾಯಕ ಅವರ ಫೋಟೋ ಹಾಗೂ ಮೆರವಣಿಗೆ ಮಾಡಬೇಕು. ಈಗಲೂ ಅವರು ಕನ್ನಡ ನಾಡಿನ ಇಂಥ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮರ ಫೋಟೋ ಮೆರವಣಿಗೆ, ರಥಯಾತ್ರೆ ಮಾಡಿದರೆ ನಾವೇ ಅವರೊಂದಿಗೆ ಕೈ ಜೋಡಿಸುತ್ತೇವೆ. ಬದಲಾಗಿ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದ ಸಾವರ್ಕರ್ ಫೋಟೋ ಇರಿಸಿ ಮಾಡುತ್ತಿರುವ ಮೆರವಣಿಗೆ ಯಡಿಯೂರಪ್ಪ ಅವರಂಥ ನಾಯಕನಿಗೆ ಶೋಭೆ ತರುವುದಿಲ್ಲ. ಹೀಗಾಗಿ ಕೂಡಲೇ ಇಂಥ ಮೆರವಣಿಗೆ ನಿಲ್ಲಿಸಲಿ ಎಂದು ಆಗ್ರಹಿಸಿದರು.

ಬಿಜೆಪಿ ನಾಯಕರಿಗೆ ಎಂದೂ ದೇಶಪ್ರೇಮಿ, ಪ್ರಾಮಾಣಿಕ ಹೋರಾಟಗಾರರು ಬೇಕಿಲ್ಲ. ಬದಲಾಗಿ ವಿವಾದಿತ ವ್ಯಕ್ತಿಗಳನ್ನು ವೈಭವಿಕರಿಸಿ ಗೊಂದಲ ಸೃಷ್ಟಿಸುವುದು, ಭಾವನಾತ್ಮಕವಾಗಿ ಕೆರಳಿಸಿ ಸಮಾಜದಲ್ಲಿ ಶಾಂತಿ‌ಕದಡುವುದೇ ಮೂಲ ಉದ್ದೇಶ ಹಾಗೂ ಆದ್ಯತೆ ವಿಷಯ ಎಂದು ಕುಟುಕಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ