ಬೆಳಗಾವಿ: ಹಿಂಡಲಗಾ ಡಬಲ್ ರಸ್ತೆಯ ಮಧ್ಯೆ ಇಂದು ಬೆಳಿಗ್ಗೆ ಚಿರತೆ ಮತ್ತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮಿಣ ಭಾಗದ 22 ಶಾಲೆಗಳಿಗೆ ಇಂದು (ಸೋಮವಾರ 22/8/2022) ಮತ್ತೆ ರಜೆ ನೀಡಲಾಗಿದೆ.
ಕಳೆದ ವಾರವೂ ಈ ಭಾಗದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆದರೆ ತೀವ್ರ ಶೋಧ ಕಾರ್ಯಾಚರಣೆಗಳ ನಂತರವೂ ಚಿರತೆ ಕಾಣಿಸದೆ ಇದ್ದಾಗ ಮತ್ತೆ ಶಾಲೆಗಳನ್ನು ಆರಂಭಿಸಲಾಗಿತ್ತು.
ಬಸ್ ಚಾಲಕರೊಬ್ಬರು ನಡು ರಸ್ತೆಯಲ್ಲೇ ಚಿರತೆ ದಾಟುತ್ತಿರುವ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದರಿಂದ ಚಿರತೆ ನಗರದಲ್ಲೇ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಇಂದು ಪುನಃ 22 ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಇದೇ ವೇಳೆ ಡಂಗುರ ಸಾರಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಎಚ್ಚರಿಸುವ ಕಾರ್ಯವನ್ನು ಸಹ ಮುಂದುವರಿಸಲಾಗುತ್ತಿದೆ.
Laxmi News 24×7