ನವದೆಹಲಿ: ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದ್ದ ಐಟಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ 8 ಯೂಟ್ಯೂಬ್ ಚಾನಲ್ ಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ.
ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು, ಸಾರ್ವಜನಿಕ ಸುವ್ಯಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿ ಹರಡುತ್ತಿದ್ದ ಕಾರಣಕ್ಕೆ 7 ಭಾರತೀಯ ಹಾಗೂ 1 ಪಾಕಿಸ್ತಾನ ಮೂಲದ ಯೂಟ್ಯೂಬ್ ಸುದ್ದಿ ಚಾನಲ್ ಗಳನ್ನು ನಿರ್ಬಂಧ ಮಾಡಿದೆ.
ನಿರ್ಬಂಧಿಸಲಾದ ಯೂಟ್ಯೂಬ್ ಚಾನಲ್ ಗಳು 114 ಕೋಟಿಗೂ ಅಧಿಕ ವೀಕ್ಷಣೆ ಹೊಂದಿದ್ದು, 85 ಲಕ್ಷದ 73 ಸಾವಿರ ಚಂದಾದಾರರನ್ನು ಹೊಂದಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಐಟಿ ನಿಯಮಗಳು, 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು 8 ಚಾನಲ್ ಗಳನ್ನು ನಿಷೇಧ ಮಾಡಲು ಆ.16ರಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ನಿಷೇಧ ಮಾಡಲಾಗಿದೆ.