Breaking News

ಕುರಿ, ಕೋಳಿ ಸಾಕಾಣಿಕೆ ಘಟಕ ಸ್ಥಾಪನೆಗೆ ಅರ್ಜಿ ಅಹ್ವಾನ

Spread the love

ಬೆಂಗಳೂರು, ಆಗಸ್ಟ್ 12: ‘ರಾಷ್ಟ್ರೀಯ ಜಾನುವಾರು ಮಿಷನ್’ ಯೋಜನೆಯಡಿ ಸಹಾಯಧನ ಸಹಿತ ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸುವವರಿಂದ ಕೇಂದ್ರ ಸರ್ಕಾರ ಅರ್ಜಿ ಅಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಲು ಅಗತ್ಯವಾಗಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

 

ಕೇಂದ್ರ ಸರ್ಕಾರ ‘ರಾಷ್ಟ್ರೀಯ ಜಾನುವಾರು ಮಿಷನ್’ ಯೋಜನೆಯಡಿ ಉದ್ಯಮಶೀಲತೆಯ ಅಭಿವೃದ್ಧಿಗಾಗಿ 2021-22ರ ಸಾಲಿಗೆ ಯೋಜನೆಯ ಮಾರ್ಗಸೂಚಿ ಅಡಿಯಲ್ಲಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, ರೈತ ಉತ್ಪಾದನಾ ಸಂಸ್ಥೆ, ಸ್ವ-ಸಹಾಯ ಸಂಘಗಳು ನೋಂದಾಯಿತ ಕಂಪನಿಯಿಂದ ಉದ್ಯಮಶೀಲ ಉಪಕ್ರಮ ಅನುಷ್ಠಾನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

 

ಯೋಜನೆ ಮಾರ್ಗಸೂಚಿ ಹೀಗಿವೆ; ಗ್ರಾಮೀಣ ಕೋಳಿ ಸಾಕಾಣಿಕೆಯಲ್ಲಿ 1,000ರೂ.ಗಿಂತ ಕಡಿಮೆ ವೆಚ್ಚದ ಕೋಳಿ ತಳಿಗಳ ಮಾತೃ ಕೋಳಿ ಫಾರಂ ಸ್ಥಾಪನೆ, ಹ್ಯಾಚರಿ ಮತ್ತು ಮಾತೃ ಕೋಳಿಮರಿಗಳ ಬ್ರೂಡಿಂಗ್ ಹಾಗೂ ಸಾಕಾಣಿಕೆಯ ಘಟಕ ಸ್ಥಾಪಿಸುವುದು. 500 ಹೆಣ್ಣು, 25 ಗಂಡು ಕುರಿ ಅಥವಾ ಮೇಕೆ ತಳಿ ಸಂವರ್ಧನಾ ಘಟಕ ಸ್ಥಾಪನೆಗೆ ಆದ್ಯತೆ.

ಹೆಣ್ಣು ಹಂದಿ 100, ಹತ್ತು ಗಂಡು ಹಂದಿಗಳ ತಳಿ ಸಂವರ್ಧನೆಗಾಗಿ ಘಟಕ ಆರಂಭಿಸಿ ಹಂದಿ ಮರಿ ಉತ್ಪಾದನೆ, ಹಂದಿಗಳನ್ನು ಸಮರ್ಪಕವಾಗಿ ಕೊಬ್ಬಿಸುವಿಕೆ. ಮೇವು ಬೆಲ್ಲ/ ರಸ ಮೇವು ಘಟಕ ಸ್ಥಾಪನೆಗೆ ಅಕಕಾಶ. ಉದ್ಯಮಶೀಲರನ್ನು ಪ್ರೋತ್ಸಾಹಿಸಿ ಪಶುಗಳಿಗೆ ಅಗತ್ಯವಾದ ಆಹಾರ ಹಾಗೂ ಮೇವಿನ ಉತ್ಪಾದನೆ ಉತ್ತೇಜಿಸಲು ಸರ್ಕಾರ ಕ್ರಮ ಒತ್ತು ನೀಡಿದೆ.

ಈ ಮಾರ್ಗಸೂಚಿ ಹಾಗೂ ಸರ್ಕಾರದ ಉದ್ದೇಶಕ್ಕನುಗುಣವಾಗಿ ಆಸಕ್ತರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಅರ್ಹತೆಗೆ ತಕ್ಕಂತೆ ಆಯ್ಕೆ ಮಾಡಿ ಪಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಅನುದಾನ ಲಭ್ಯತೆ ನೋಡಿಕೊಂಡು ಯೋಜನೆಯಡಿ ಸೂಕ್ತ ರೀತಿಯಲ್ಲಿ ಸಹಾಯ ಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಅರ್ಜಿ ಸಲ್ಲಿಕೆಗೆ ಸಂಪರ್ಕಿಸಿ; ಪ್ರತಿ ಯೋಜನೆ ಅನುಷ್ಠಾನ ಜಾರಿಗೆ ಮೂಲ ಬಂಡಾವಳದಲ್ಲಿ ಶೇ. 50ರಷ್ಟು ಸಹಾಯಧನವನ್ನು ಎರಡು ಕಂತುಗಳ ರೂಪದಲ್ಲಿ ಫಲಾನುಭವಿಗಳಿಗೆ ಒದಗಿಸಲಾಗುವುದು. ಆಸಕ್ತರು ಆನ್‌ಲೈನ್‌www.nlm.udyamimitra.inನಲ್ಲಿ ದಾಖಲೆ ಸಹಿತ ಅರ್ಜಿ ಸಲ್ಲಿಬಹುದು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಜಿಲ್ಲಾ ಉಪ ನಿರ್ದೇಶಕರು/ ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟ, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ಇಲ್ಲವೇ ಸಹಾಯವಾಣಿ ಸಂಖ್ಯೆ 82771 00200ಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ