Breaking News

ಅತಿವೃಷ್ಟಿ ಹಾನಿ ಒಳಗಾದ ಮನೆಗಳನ್ನು ಸರ್ವೇ ಸರಿಯಾಗಿ ಮಾಡಿ: ಸಾರ್ವಜನಿಕರ ಆಕ್ರೋಶ

Spread the love

ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆಯಿಂದ ಧರೆಗುರುಳಿದ ಮನೆಗಳ ಸರ್ವೆ ಕಾರ್ಯ ಸರಿಯಾಗಿ ನಡೆದಿಲ್ಲ. ಸಾಕಷ್ಟು ಸಾರ್ವಜನಿಕ ಮನೆಗಳಿಗೆ ಪರಿಹಾರ ಪಟ್ಟಿಯಿಂದ ವಜಾಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾನಾಪುರ ತಾಲ್ಲೂಕಿನಲ್ಲಿ ಕೇರವಾಡ ಗ್ರಾವi ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂದುರ್ ಗ್ರಾಮದಲ್ಲಿ ಶೋಭಾ .ಉ. ಹಿರೇಮಠ ಅವರ ಮನೆ ಎರಡು ತಿಂಗಳ ಹಿಂದೆ ನಿರಂತರ ಮಳೆಯಿಂದ ಬಹಳಷ್ಟು ಹಾನಿಯಾಗಿದ್ದು. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಖಾನಾಪುರ ತಹಸೀಲ್ದಾರರಿಗೆ ಅವರಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಭಾವುಕರಾದರು.

ಈ ವೇಳೆ ಮಾತನಾಡಿದ ಶೋಭಾ ಅವರು ನಾವು ಬಡವರು ಕೂಲಿ ಮಾಡಿ ಜೀವನ ಸಾಗಿಸಿದರು. ಇದ್ದ ಆಸರೆ ಮನೆ ಮಳೆಗೆ ಕುಸಿದಿದೆ. ಪರಿಹಾರ ಸಿಗಬಹುದೆಂಬ ಭರವಸೆಯಿಂದ ಸಲ್ಲಿಸಿದ್ದ ಅರ್ಜಿಯನ್ನು ಅಧಿಕಾರಿಗಳು ವಜಾಗೊಳಿಸಿದ್ದಾರೆ. ತಕ್ಷಣ ಮನೆಗಳ ಮರು ಸರ್ವೇ ನಡೆಸಿ ನಮಗೆ ಹೊಸ ಮನೆ ಕಟ್ಟಲು ಸೂಕ್ತ ಪರಿಹಾರ ಒದಗಿಸಬೇಕೆಂದು ಮಾಧ್ಯಮದ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು

ಇನ್ನು ಇದೇ ವೇಳೆ ಇದಕ್ಕೆ ಧ್ವನಿಗೂಡಿಸಿದ ಗ್ರಾಮ ಪಂಚಾಯತ್ ಸದಸ್ಯರು , ಬಡವರ ಮನೆಗಳ ಪರಿಹಾರದಲ್ಲಿ ನಿರ್ಲಕ್ಷತನ ತೋರುವುದು ಸರಿಯಲ್ಲ. ಮನೆ ಕಳೆದುಕೊಂಡವರೆಲ್ಲ ಬಡವರು. ಈಗ ಅವರು ಕಷ್ಟದಲ್ಲಿ ಸಿಲುಕಿದ್ದಾರೆ .ತಕ್ಷಣ ಎಲ್ಲ ಅರ್ಜಿದಾರರಿಗೂ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲು ಒತ್ತಾಯಿಸಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ