Breaking News

ಆಗಸ್ಟ್ 5: ತೀವ್ರ ಕುಸಿತಗೊಂಡ ಕಚ್ಚಾ ತೈಲ ದರ; ಭಾರತದಲ್ಲಿ ಇಂಧನ ದರ ಸ್ಥಿರ

Spread the love

ಜಾಗತಿಕ ಕಚ್ಚಾತೈಲ ಬೆಲೆ ಇಂದು (ಆಗಸ್ಟ್ 5) ತೀವ್ರವಾಗಿ ಇಳಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಗಡಿ ದಾಟಿದ್ದ ಕಚ್ಚಾ ತೈಲ ದರ ಇತ್ತೀಚೆಗೆ ಕಡಿಮೆಯಾಗಿದೆ. ಅದಾದ ಬಳಿಕ ಪ್ರತಿ ದಿನ ಕಚ್ಚಾತೈಲ ದರವು ಏರಿಕೆ ಕಾಣುತ್ತಿದ್ದವು. ಇಂದು 95 ಡಾಲರ್ ಗಡಿಯಿಂದ ಕೆಳಗಿಳಿದಿದೆ.

ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ, ಚೀನಾ ತೈವಾನ್ ಬಿಕ್ಕಟ್ಟು ಮುಂತಾದ ವಿದ್ಯಮಾನಗಳಿಂದ ಕಚ್ಚಾ ತೈಲ ದರ ಏರಿಳಿತ ಕಾಣುತ್ತಿದೆ. ಆದರೆ ಭಾರತದಲ್ಲಿ ಕಳೆದ ಹಲವಾರು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿದೆ.

ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಹಿನ್ನೆಲೆ ಮೇ 21ರಂದು ಇಂಧನ ದರವು ಇಳಿಕೆಯಾಗಿತ್ತು.

ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ಇಂಧನ ದರ ಪರಿಷ್ಕರಣೆಯಾಗದ ಕಾರಣದಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13.08 ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 24.09 ರು ನಷ್ಟು ನಷ್ಟು ಅನುಭವಿಸುತ್ತಿವೆ. ದೇಶದಲ್ಲೇ ಅತ್ಯಧಿಕ ಬೆಲೆ ರಾಜಸ್ಥಾನದ ಗಂಗಾನಗರದಲ್ಲಿ ದಾಖಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ 112.44 ರು ಹಾಗೂ ಡೀಸೆಲ್ 97.30 ರು ಇದೆ.

ಪ್ರಮುಖ ನಗರಗಳಲ್ಲಿ ಕಳೆದ ಏಳು ದಿನಗಳಿಂದಪೆಟ್ರೋಲ್ ಮತ್ತು ಡೀಸೆಲ್ ಬೆಲೆಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

By Mahesh Malnad
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ
 ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಳಿತ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್​- ಡೀಸೆಲ್​ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್‌ನ ಬೆಂಚ್​​ಮಾರ್ಕ್​ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್​​ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನಡುವೆ ಬ್ರೆಂಟ್​ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 94.33 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರಿನಲ್ಲಿ 7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ 5: 101.94 ರೂ.
ಆಗಸ್ಟ್ 4: 101.94 ರೂ.
ಆಗಸ್ಟ್ 3: 101.94 ರೂ.
ಆಗಸ್ಟ್ 2: 101.94 ರೂ.
ಆಗಸ್ಟ್ 1: 101.94 ರೂ.
ಜುಲೈ 31: 101.94 ರೂ.
ಜುಲೈ 30: 101.94 ರೂ.

ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 5: 87.89 ರೂ.
ಆಗಸ್ಟ್ 4: 87.89 ರೂ.
ಆಗಸ್ಟ್ 3: 87.89 ರೂ.
ಆಗಸ್ಟ್ 2: 87.89 ರೂ.
ಆಗಸ್ಟ್ 1: 87.89 ರೂ.
ಜುಲೈ 31: 87.89 ರೂ.
ಜುಲೈ 30: 87.89 ರೂ.

7 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ