Breaking News

ಸಮಾವೇಶ.. ಹಲವು ಸಂದೇಶ: ಸಿದ್ದರಾಮಯ್ಯ ಕೇಂದ್ರಬಿಂದು;

Spread the love

ಸಿದ್ದರಾಮಯ್ಯ-75 ಸಂಭ್ರಮಾಚರಣೆಯತ್ತ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ. ಈ ಶಕ್ತಿ ಪ್ರದರ್ಶನದ ವೇದಿಕೆ ರಾಜ್ಯ ರಾಜಕಾರಣದ ದಿಕ್ಕುದೆಸೆ ಬದಲಿಸಲು ಕಾರಣವಾಗಬಹುದೇ? ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಭೂಮಿಕೆಯಾಗಬಹುದೇ?

ಜಾತಿ ಸಮೀಕರಣ, ಮತಗಳ ಧ್ರುವೀಕರಣಕ್ಕೆ ಬೀಜಾಂಕುರವಾಗಬಹುದೇ? ಎಂಬ ಚರ್ಚೆಗಳು ನಡೆದಿವೆ. ಈ ಚರ್ಚೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಕಾಂಗ್ರೆಸ್ ಮಾತ್ರವಿಲ್ಲ, ಇತರ ಎರಡು ಪಕ್ಷಗಳೂ ಸಮಾವೇಶದ ಪರಿಣಾಮವನ್ನು ಆತಂಕದಿಂದಲೇ ಎದುರು ನೋಡುತ್ತಿವೆ.

ಈ ಸಮಾವೇಶ ಸಿದ್ದರಾಮಯ್ಯ ಪಾಲಿಗೆ ಮಹತ್ವದ್ದು. ಕಾಂಗ್ರೆಸ್ ಹೆಸರಿನಲ್ಲಿ ಸಂಘಟನೆ ಮಾಡದಿದ್ದರೂ ಪಕ್ಷದ ಮುಖಂಡರೇ ನಡೆಸಿರುವ ಈ ಸಮಾರಂಭದಲ್ಲಿ ಅವರೇ ಕೇಂದ್ರಬಿಂದು. ಎಪ್ಪತೆôದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಇದರ ಪರಿಣಾಮ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಪಕ್ಷದಲ್ಲಿ ಬೆರಳೆಣಿಕೆಯಷ್ಟು ಜನ ಒಳಗೊಳಗೆ ಅಸಹನೆ ಹೊಂದಿದ್ದರೂ ಹೆಚ್ಚಿನ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಅಮೃತ ಮಹೋತ್ಸವ ಸಮಾವೇಶದಿಂದ ದೊಡ್ಡ ನಿರೀಕ್ಷೆ ಇಟ್ಟುಕೊಂಡಂತಿದೆ. ಚುನಾವಣೆಗೆ ಇನ್ನು 9 ತಿಂಗಳಿರುವಾಗ ಈ ಸಮಾವೇಶದ ಮೂಲಕ ಪಕ್ಷದ ಪರವಾದ ವಾತಾವರಣ ಸೃಷ್ಟಿಸಿಕೊಳ್ಳಲು ಹೈಕಮಾಂಡ್ ಬಯಸಿದೆ. ರಾಜ್ಯದ ಮಟ್ಟಿಗೆ ಕಾಂಗ್ರೆಸ್​ಗೆ ಈಗಿರುವ ಏಕೈಕ ಆಶಾಕಿರಣವೆಂದರೆ ಸಿದ್ದರಾಮಯ್ಯ ಮಾತ್ರ. ಆದ್ದರಿಂದಲೇ ಈ ಕಾರ್ಯಕ್ರಮದಿಂದ ಖಂಡಿತ ಲಾಭದ ಫಸಲು ತೆಗೆಯಬಹುದೆಂಬ ಲೆಕ್ಕಾಚಾರ ಹಾಕಿಯೇ ರಾಹುಲ್ ಗಾಂಧಿ ಹಾಜರಾಗುತ್ತಿದ್ದಾರೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ