Breaking News

ಲಕ್ಷ್ಮೀ ಹೆಬ್ಬಾಳ್ಕರ್ ಬೋಗಸ್‍ಗಿರಿ ಮಾಡಿ, ಕುಕ್ಕರ್ ಕೊಟ್ಟು ಕಳೆದ ಬಾರಿ ಆರಿಸಿ ಬಂದಿದ್ದಾರೆ.: ಶಿವಾಜಿ ಸುಂಠಕರ್

Spread the love

ಬೆಳಗಾವಿ ತಾಲೂಕಿನ ಬೆಳವಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳು ಮಜುಕರ್ ಕಾಂಗ್ರೆಸ್ ಪಕ್ಷ ಸೇರಿದ್ದ ವಿಚಾರ ಸಧ್ಯ ಟ್ವಿಸ್ಟ್ ಪಡೆದುಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಂಇಎಸ್ ಮುಖಂಡ ಶಿವಾಜಿ ಸುಂಠಕರ್ ಏಕಾಏಕಿ ಕರೆದುಕೊಂಡು ಹೋಗಿ ಕಾಂಗ್ರೆಸ್ ಶಾಲು, ಮಾಲೆ ಹಾಕಿದ್ದಾರೆ. ಇದೆಲ್ಲಾ ಸುಳ್ಳು ಬಾಳು ಮಜುಕರ್ ಕಾಂಗ್ರೆಸ್ ಸೇರಿಲ್ಲ, ಮುಂದೆಯೂ ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದಾರೆ.

ಹೌದು ಇತ್ತಿಚಿಗೆ ಬೆಳವಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂಇಎಸ್ ಮುಖಂಡ ಬಾಳು ಮಜುಕರ್ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿರುವ ಫೋಟೋ ಎಲ್ಲೆಡೆ ಹರಿದಾಡಿತ್ತು. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಾಜಿ ಸುಂಠಕರ್ ಬೆಳವಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳು ಮಜುಕರ್ ಗ್ರಾಮ ಪಂಚಾಯತಿ ಕೆಲಸ ಸಂಬಂಧ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‍ನ್ನು ಭೇಟಿಯಾಗಿದ್ದಾರೆ. ಯಾವುದೋ ಸಭೆಯಲ್ಲಿ ಮೇಡಂ ಇದ್ದಾರೆ ಎಂದು ಕರೆದುಕೊಂಡು ಹೋಗಿ ಪುಷ್ಪಗುಚ್ಛ ನೀಡಿ ಕಾಂಗ್ರೆಸ್ ಶಾಲು ಹಾಕಿ ಕಾಂಗ್ರೆಸ್ ಸೇರಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬಳಿಕ ಗ್ರಾಮ ಪಂಚಾಯತಿ ಸದಸ್ಯರು ಬಾಳು ಮಜುಕರ್ ಅವರನ್ನು ವಿಚಾರಣೆ ಮಾಡಿದಾಗ ನಾನು ಕೆಲಸದ ಸಂಬಂಧ ಶಾಸಕರ ಬಳಿ ಹೋಗಿದ್ದೆ. ನಾನು ಎಂದಿಗೂ ಕಾಂಗ್ರೆಸ್ ಸೇರಿಲ್ಲ, ನಾನು ಎಂಇಎಸ್ ಕಾರ್ಯಕರ್ತನಾಗಿದ್ದೇನೆ. ಮುಂದೆಯೂ ಎಂಇಎಸ್ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದಿದ್ದಾರೆ ಎಂದರು.

ಓರ್ವ ಜನಪ್ರತಿನಿಧಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಮರಾಠಾ ಸಮಾಜದ ಮೇಲೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ನಾವು ಎಚ್ಚೆತ್ತುಕೊಂಡಿದ್ದೇವೆ. ಇಂತಹ ಬೋಗಸ್‍ಗಿರಿ ಮಾಡಿ, ಕುಕ್ಕರ್ ಕೊಟ್ಟು ಕಳೆದ ಬಾರಿ ಆರಿಸಿ ಬಂದಿದ್ದಿರಿ. ಇದನ್ನೇ ನೀವು ಮುಂದುವರಿಸಿದ್ರೆ ನಮ್ಮ ಮರಾಠ ಸಮಾಜ ಎಲ್ಲಾ ಒಂದಾಗಿ ಮುಂದಿನ ರಾಜಕೀಯದಲ್ಲಿ ತಕ್ಕ ಪಾಠ ಕಲಿಸುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ