Breaking News

ಗಾಳಿಪಟ-2ʼ ಟ್ರೇಲರ್‌ ರಿಲೀಸ್‌ :

Spread the love

ಯೋಗರಾಜ್‌ ಭಟ್‌ ನಿರ್ದೇಶನದ ʼಗಾಳಿಪಟ-2ʼ ಚಿತ್ರದ ಬಹು ನಿರೀಕ್ಷಿತ ಟ್ರೇಲರ್‌ ರಿಲೀಸ್‌ ಆಗಿದೆ.

ಚಿತ್ರದ ಬಗ್ಗೆ ಚಂದವನದಲ್ಲಿ ದೊಡ್ಡ ನಿರೀಕ್ಷೆಯಿದೆ. ಈಗಾಗಲೇ ಆ ನಿರೀಕ್ಷೆಯನ್ನು ಚಿತ್ರದ ಹಾಡು ಹಾಗೂ ಕ್ಯಾರೆಕ್ಟರ್ ಟೀಸರ್‌ ದುಪ್ಪಟ್ಟುಗೊಳಿಸಿದೆ.

ಇದೀಗ ಟ್ರೇಲರ್‌ ರಿಲೀಸ್‌ ಆಗಿದ್ದು, ಹೊಸ ಬಗೆಯ ಕಥೆಯಿಂದ ಗಮನ ಸೆಳೆಯುತ್ತಿದೆ. ‌

ʼನೀನು ಬಗೆಹರಿಯದ ಹಾಡುʼ, ʼದೇವ್ಲೆ ದೇವ್ಲೆʼ,ʼಎಕ್ಸಾಂ ಹಾಡುʼ ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದುಕೊಂಡು ಸೂಪರ್‌ ಹಿಟ್‌ ಸಾಲಿಗೆ ಸೇರಿದೆ.

ಟ್ರೇಲರ್‌ ನಲ್ಲಿ ಏನಿದೆ? :

ʼನೀರುಕೋಟೆʼ ಎಂಬ ಊರಿನಲ್ಲಿ ನಡೆಯುವ ಮೂರು ಜನರ ಸ್ನೇಹಿತರ ಬದುಕಿನ ಕಹಾನಿಯನ್ನು ಹಾಸ್ಯ,ಭಾವನೆ ತುಂಬಿದ ಸಂಭಾಷಣೆ ಹಾಗೂ ಜೀವನ ಪಾಠವನ್ನು ಹೇಳುವ ಮೇಸ್ಟ್ರ ಮೂಲಕ ಯೋಗರಾಜ್‌ ಭಟ್‌ ಟ್ರೇಲರ್‌ ನಲ್ಲಿ ಹೇಳಿದ್ದಾರೆ.

ʼಗಾಳಿಪಟʼದಲ್ಲಿ ಬೇಟೆಗಾರನಾಗಿದ್ದ ಅನಂತ್‌ ನಾಗ್‌ ಇಲ್ಲಿ ಕನ್ನಡ ಮೇಸ್ಟ್ರು ಕಿಶೋರ್‌ ಆಗಿದ್ದಾರೆ. ಇವರ ಸ್ಕೂಲಿಗೆ ಬರುವ ಮೂವರು ವಿದ್ಯಾರ್ಥಿಗಳು, ಒಬ್ಬ ತುಂಟ ಗಣಿ, ಮತ್ತೊಬ್ಬ ಕೋಪಿಷ್ಟ ದಿಗಿ, ಇನ್ನೊಬ್ಬ ಶಾಂತ ಸ್ವಭಾವದ ಭೂಶಿ. ಈ ಮೂರು ಜನರ ಬಾಳಿನ ಕಥೆಯನ್ನು ʼಗಾಳಿಪಟ-2ʼ ವಿನ ಟ್ರೇಲರ್‌ ನಲ್ಲಿ ಝಲಕ್‌ ಬಿಟ್ಟಿದ್ದಾರೆ.

ಇನ್ನು ಗಾಳಿಪಟ ಮೊದಲ ಭಾಗದ ಮೆಲುಕು ಟ್ರೇಲರ್‌ ನಲ್ಲಿದೆ. ಮುಗ್ಗಿಲುಪೇಟೆ ಊರಿನ ಹಿನ್ನೆಲೆಯೂ ಚಿತ್ರದಲ್ಲಿರಲಿದೆ ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ.

ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್‌, ವೈಭವಿ ಶಾಂಡಿಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ರಂಗಾಯಣ ರಘು, ಪದ್ಮಜಾ ರಾವ್‌,ಶ್ರೀನಾಥ್‌,ಪ್ರಕಾಶ್‌ ತುಮಿನಾಡು ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯೂಟ್ಯೂಬ್‌ ನಲ್ಲಿ ಟ್ರೇಲರ್‌ ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ