ಬೆಳಗಾವಿ: ಜಮೀರ್ ಅಹ್ಮದ್ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಮುಂಬರುವ ದಿನಗಳಲ್ಲಿ ಸಿಎಂ ಆಗುತ್ತಾರೆ ಎಂದು ಶ್ರೀ ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಯಕ್ಕುಂಡಿ ಗ್ರಾಮದ ದೀಲಾವರ್ ದರ್ಗಾದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಕ್ಕುಂಡಿ ಗ್ರಾಮದ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿದ್ದು, ಶಂಕರ ಪಾಟೀಲ್ ಅವರಿಂದ ದರ್ಗಾ ಅಭಿವೃದ್ಧಿಯಾಗಿದೆ. ಬೆಂಗಳೂರಿನಿಂದ ದರ್ಗಾಕ್ಕೆ ಮಾಜಿ ಸಚಿವರು ಜಮೀರ್ ಅಹ್ಮದ್‍ಖಾನ್ ಬಂದಿದ್ದಾರೆ. ಇದರ ಶಕ್ತಿ ಎಷ್ಟಿದೆ ಎನ್ನುವುದನ್ನು ನೀವು ವಿಚಾರ ಮಾಡಬೇಕು.
ಜಮೀರ್ ಅಹ್ಮದ್‍ಖಾನ್ ಅವರು ಮುಂದೆ ಸಿಎಂ ಆಗುತ್ತಾರೆ. ಜಮೀರ್ ಅಹ್ಮದ್ ಖಾನ್ ಅವರು ಜಾತಿ ಧರ್ಮ ನೋಡದೇ ಸರ್ವಧರ್ಮೀಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ.