ಬಿಗ್ ಬಾಸ್ ಸೇರಿದಂತೆ ವಿವಿಧ ಶೋಗಳ ಮೂಲಕ ನಾಡಿನ ಜನರಿಗೆ ಪರಿಚಿತರಾಗಿರುವ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜನರ ಹೃದಯವನ್ನು ಗೆದ್ದು,ಅವರ ಮನ ಮುಟ್ಟುವುದು ನಿಜವಾದ ಸಾಧನೆ ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್ ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ನಿವೇದಿತಾ ಗೌಡ ತಮ್ಮ ಉಪಸ್ಥಿತಿಯೊಂದಿಗೆ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ ಎಂದು ಮಿಸೆಸ್ ಇಂಡಿಯಾ ಇಂಕ್ ಸಂಸ್ಥೆ ಬರೆದುಕೊಂಡಿದ್ದೆ. ಇದನ್ನು ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ.
ಕನ್ನಡದ ರ‍್ಯಾಂಪರ್ ಚಂದನ್ ಶೆಟ್ಟಿಯ ಪತ್ನಿಯಾಗಿರುವ ನಿವೇದಿತಾ ಗೌಡ ಸದ್ಯ ಕಲ್ಲರ್ಸ್ ಕನ್ನಡದ ಗಿಚ್ಚಿ ಗಿಲಿ ಗಿಲಿ ಶೋನಲ್ಲಿಯೂ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
Laxmi News 24×7