Breaking News

ಬಟ್ಟೆಯಿಂದ ವ್ಯಕ್ತಿ ಅಳೆಯೋ ಸಮಾಜ ನಮ್ಮದು ಎಂದ ಅನಿತಾ ಭಟ್

Spread the love

ಬೆಂಗಳೂರು: ಕನ್ನಡ, ತೆಲುಗು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಹಾಟ್ ಬೆಡಗಿ ಅನಿತಾ ಭಟ್ ಬಟ್ಟೆ ಬಗ್ಗೆ ಚರ್ಚೆಗೆ ಇಳಿದಿದ್ದು, ನೆಟ್ಟಿಗರ ಪ್ರಶ್ನೆಗೆ ತಕ್ಕ ಉತ್ತರ ನೀಡಿದ್ದಾರೆ. ಅದೇನಪ್ಪಾ ಬಟ್ಟೆ ವಿಚಾರ ಅಂತೀರಾ ಈ ವಿಡಿಯೋ ನೀಡಿ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಹಾಟ್ ಬೆಡಗಿ ಅನಿತಾ ಭಟ್, ತಮ್ಮ ಹಾಟ್ ಫೋಟೋಗಳಿಂದಲೇ ಕಿಕ್ಕೇರಿಸುತ್ತಿರುತ್ತಾರೆ. ಇದೀಗ ಅದೇ ರೀತಿಯ ಫೋಟೋ ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿಶೇಷವೆಂದರೆ ಸ್ವತಃ ಅನಿತಾ ಭಟ್ ನೆಟ್ಟಿಗರ ಪ್ರಶ್ನೆಗಳಿಗೆ ಅಷ್ಟೇ ಸಮರ್ಥವಾಗಿ ಉತ್ತರಿಸುತ್ತಿದ್ದಾರೆ. ಹೀಗಾಗಿ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದ್ದು, ಮಳೆ ಬಂದ ಸಂದರ್ಭದಲ್ಲಿ ಅನಿತಾ ಹಾಕಿದ ಒಂದು ಫೋಟೋ. ಹೌದು ಇತ್ತೀಚೆಗೆ ಮಳೆ ಬಂದ ಸಂದರ್ಭದಲ್ಲಿ ಅನಿತಾ ಅವರು ರೇನ್ ಎಂದು ಬರೆದು ಬೋಲ್ಡ್ ಫೋಟೋ ಹಾಕಿದ್ದರು. ಇದಕ್ಕೆ ನೆಟ್ಟಿಗರು ಹಲವು ರೀತಿಯ ಕಮೆಂಟ್‍ಗಳನ್ನು ಮಾಡಿದ್ದರು. ಇದನ್ನು ಗಮನಿಸಿದ ಅನಿತಾ ಭಟ್, ಕಮೆಂಟ್ ಮಾಡುವುದು ಮುಗೀತಾ? ಇಲ್ಲಾ ಇನ್ನೂ ಚರ್ಚೆ ಮುಂದುವರಿಸ್ತೀರಾ ಮಳೆ ಬಗ್ಗೆ ಎಂದು ಪ್ರಶ್ನಿಸಿದ್ದರು.

ಇದಾದ ಬಳಿಕ ಲೆಗ್ಸ್ ಫಾರ್ ದಿ ಡೇ ಎಂದು ಬರೆದು ಕಾಲಿನ ಸೌಂದರ್ಯ ತೋರಿಸುವ ಎರಡು ಫೋಟೋಗಳನ್ನು ಹಾಕಿದ್ದರು. ಅಲ್ಲದೆ ಹೆದ್ರಕೊಂಡು ಬದುಕೋದಾದ್ರೆ ಭೂಮಿಯಿಂದಾನೇ ಹೋಗಿ ಬಿಡ್ತಿದ್ದೆ. ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯೋ ಸಮಾಜ ನಮ್ಮದು. ಹ್ಯಾವ್ ಎ ಗ್ರೇಟ್ ಡೇ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದು, ನಮ್ಮ ಸಮಾಜ ಬಟ್ಟೆಯಿಂದ ವ್ಯಕ್ತಿ ಅಳೆದೇ ಹಿಂಗಾಗಿದ್ದೀರ ನೀವು. ಇನ್ನು ಅಳೆಯದೆ, ಟ್ರೋಲ್ ಮಾಡ್ದೆ ಇದ್ದಿದ್ರೆ ಹೆಂಗ್ ಇರ್ತಿದ್ರೋ ನೀವು ದೇವ್ರೇ ಬಲ್ಲ. ಈ ನಿಮ್ಮ ಟ್ವೀಟ್‍ನಲ್ಲಿ ಅದೆಂಥಾ ನೀತಿ ಪಾಠ ಇದೆಯೋ ಸಮಾಜಕ್ಕೆ ನಾ ಕಾಣೆ ಎಂದು ಕಮೆಂಟ್ ಮಾಡಿದ್ದಾನೆ.

ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ ಕ್ವಾರಂಟೈನ್ ನಿಜವಾಗಿಯೂ ನನ್ನನ್ನು ನಿರುದ್ಯೋಗಿಯನ್ನಾಗಿ ಮಾಡಿದೆ. ಹೀಗಾಗಿ ಎಲ್ಲ ಕಮೆಂಟ್‍ಗಳಿಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದೇನೆ. ಕಿಂಡಲ್‍ನಲ್ಲಿ ಯಾವ ಉತ್ತಮ ಪುಸ್ತಕ ಡೌನ್‍ಲೋಡ್ ಮಾಡಿಕೊಳ್ಳಬಹುದು ಸಲಹೆ ನೀಡಿ. ಈ ಮೂಲಕ ನನ್ನಷ್ಟಕ್ಕೆ ನಾನು ಬ್ಯುಸಿಯಾಗುತ್ತೇನೆ. ಕನ್ನಡ ಪುಸ್ತಕಗಳು, ಆದರೆ ಸಾಮಾಜಿಕ ಕಾದಂಬರಿಗಳು ಬೇಡ ಎಂದು ಕೇಳಿದ್ದಾರೆ.

ಸದ್ಯ ‘ಬೆಂಗಳೂರು-69’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಲಾಕ್‍ಡೌನ್ ಹಿನ್ನೆಲೆ ಚಿತ್ರದ ಕೆಲಸಗಳು ಸ್ಥಗಿತಗೊಂಡಿವೆ. ಅಂದಹಾಗೆ ಈ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದು, ಚಿತ್ರದ ಪೋಸ್ಟರ್ ಹಾಗೂ ಟೀಸರ್‍ನಲ್ಲಿ ಅನಿತಾ ಭಟ್ ಅವರ ಹಾಟ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ