ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿದೆ. ಇದೇ ಸಂದರ್ಭದಲ್ಲಿ ಜಾಕ್ರೋಶಕ್ಕೆ ಹೆದರಿ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ. ಇತ್ತ ಅವರ ನಿವಾಸಕ್ಕೆ ಮುತ್ತಿಗೆ ಹಾಕಿರೋ ಸಾವಿರಾರು ಪ್ರತಿಭಟನಾಕಾರರು, ಅಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಅಲ್ಲದೇ ಅಧ್ಯಕ್ಷರು ಮತ್ತು ಪ್ರಧಾನಿ ರಾಜೀನಾಮೆ ನೀಡೋವರೆಗೆ ಸ್ಥಳದಿಂದ ತೊರೆಯೋದಿಲ್ಲ ಎಂದು ಘೋಷಿಸಿದ್ದಾರೆ. ಈ ಮಧ್ಯೆ ಗೋಟಬಯ ನಿವಾಸದಲ್ಲಿ ಕೋಟ್ಯಂತರ ರೂ ಹಣ ಕೂಡ ಪತ್ತೆಯಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೋಟಬೊಯ ರಾಜಪಕ್ಸ ಅವರ ನಿವಾಸದಲ್ಲಿ 1.80 ಕೋಟಿ ರೂ ನಗದು ಹಣವನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿರೋದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಇದೀಗ ಅಧ್ಯಕ್ಷರ ನಿವಾಸದಲ್ಲಿ ಕಂತೆ ಕಂತೆ ಹಣ ದೊರತದ್ದು, ಆ ಹಣವನ್ನು ಪ್ರತಿಭಟನಾಕಾರರು ಎಣಿಸುತ್ತಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.