ಇವ್ನು ಅಂತೀಂತಾ ವಂಚಕ ಅಲ್ಲ ಸ್ವಾಮಿ!
ಅಷ್ಟಕ್ಕೂ ಈತ ಮಾಡಿರುವ ಮಹಾ ಗಣಂಧಾರಿ ಕೆಲಸ ಏನೂ ಅಂದ್ರೆ. ತಾನೇ ಕೆಲಸ ಮಾಡುತ್ತಿದ್ದ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಅಲ್ಲಿನ ಮ್ಯಾನೇಜರ್ಗಳ ಐಡಿ ಮೂಲಕ ಹಣ ಲಪಟಾಯಿಸಿರೋ ಆರೋಪ ಈತನ ಮೇಲೆ ಬಂದಿದೆ. ಹೌದು, ಹೀಗೆ ಏನು ತಿಳಿಯದ ಹಾಗೆ ನಿಂತಿರುವ ಈತನ ಹೆಸರು ಪ್ರವೀಣ್ ಪತ್ರಿ ಅಲಿಯಾಸ್ ಪಿ. ದಿಕ್ಷಿತ್. ಅಷ್ಟಕ್ಕೂ ಈತ ಎಲ್ಲಿ ಕೆಲಸ ಮಾಡ್ತಿದ್ದ ಅಂದ್ರೆ ಬಾಗಲಕೋಟೆ ಜಿಲ್ಲಾ ಸಹಕಾರಿ ಬ್ಯಾಂಕ್ನಲ್ಲಿ. ಬಾಗಲಕೋಟೆ ಡಿಸಿಸಿ ಬ್ಯಾಂಕಿನ ಕಮತಗಿ, ಗುಡೂರು, ಅಮೀನಗಡ ಶಾಖೆಗಳಲ್ಲಿ ಈತ ಪಿಯೂನ್ (ಸಿಪಾಯಿ) 2014 ರಿಂದ ಇಲ್ಲಿಯವರೆಗೆ ಕೆಲಸ ನಿರ್ವಹಿಸುತ್ತ ಬಂದಿದ್ದಾನೆ.
ವಂಚಕ ಪ್ರವೀಣ್
ವಂಚಕ ಪ್ರವೀಣ್
ಮ್ಯಾನೇಜರ್ ಐಡಿ ಬಳಸಿ ಹಣ ಲೂಟಿ!
ಈ ವೇಳೆ ಮೂರು ಶಾಖೆಗಳಲ್ಲಿ ಆಯಾ ಶಾಖೆಗಳ ಮ್ಯಾನೇಜರ್ ಗಳ ಐಡಿ ಬಳಸಿ ಇಂಟೆರೆಸ್ಟ್ ಅನ್ ಡಿಪಾಸಿಟ್ ಹಣವನ್ನು ಲೂಟಿ ಮಾಡಿದ್ದಾರೆ. ಅದು ಲಕ್ಷ, ಹತ್ತು ಲಕ್ಷ, 50 ಲಕ್ಷ ಅಲ್ಲ, ಬರೋಬ್ಬರಿ ನಾಲ್ಕೂವರೆ ಕೋಟಿ ರೂಪಾಯಿ. ಇದನ್ನ ಖುದ್ದು ಬಾಗಲಕೋಟೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಜಯಕುಮಾರ್ ಸರನಾಯಕ ಅವರೇ ಸ್ವತಃ ಮಾಹಿತಿ ನೀಡಿದ್ದಾರೆ. ಜ್ಯೂನಿಯರ್ ರಘು ದಿಕ್ಷಿತ್ ಅಂತ ಹೇಳಿಕೊಳ್ತಿದ್ದ, ಜೊತೆಗೆ ತನ್ನ ಹೆಸರನ್ನು ಪಿ ದಿಕ್ಷಿತ್ ಎಂದು ಹೆಸರು ಖುದ್ದಾಗಿ ಇಟ್ಟುಕೊಂಡಿದ್ದನಂತೆ.
ವಂಚಕ ಪ್ರವೀಣ್
ಲೂಟಿ ಮಾಡಿದ ಹಣದಲ್ಲಿ ಮೋಜು-ಮಸ್ತಿ!
ಇನ್ನು ಪ್ರವೀಣ್ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಸುಳಿಬಾವಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಹೀಗೆ ಲೂಟಿ ಹೊಡೆದ ಹಣದಲ್ಲಿ ಆರೋಪಿ ಪ್ರವೀಣ್ ಮೋಜು ಮಸ್ತಿ ಮಾಡಿದ್ದಾನಂತೆ. ಹೆಲಿಕಾಪ್ಟರ್ ನಲ್ಲಿ ಮೆರೆಯೋದು, ಊರ ತುಂಬ ಮೆರವಣಿಗೆ, ನಾಟಕ, ಹಾಡು, ಪುಲ್ ಹವಾ ಮಾಡಿಕೊಂಡಿದ್ದಾನಂತೆ. ಪಾಸ್ ಪೋರ್ಟ್ ಕೂಡ ಹೊಂದಿದ್ದ ಪಿಯೂನ್ ಪ್ರವೀಣ್ ತನಗೆ ಅನ್ನ ನೀಡ್ತಿದ್ದ ಬ್ಯಾಂಕ್ ಗೆ ಭರ್ಜರಿ ಪಂಗನಾಮ ಹಾಕಿದ್ದಾನೆ.
ವಂಚಕ ಪ್ರವೀಣ್
ಸದ್ಯ ಪ್ರವೀಣ್ ಎಗರಿಸಿರೋ ಹಣದಲ್ಲಿ ಕಮತಗಿ ಶಾಖೆಯಲ್ಲಿ 56 ಲಕ್ಷ ವಂಚನೆ ಮಾಡಿರೊದು ಪಕ್ಕಾ ಆಗಿದ್ದು, ಇದನ್ನ ಸ್ವತಃ ಬ್ಯಾಂಕ್ ಆಡಳಿತ ಮಂಡಳಿ ಮುಂದೆ ಆತ ಒಪ್ಪಿಕೊಂಡಿದ್ದಾನಂತೆ. ಇನ್ನು ಗೂಡೂರು,ಅಮೀನಗಢ ಶಾಖೆಯಲ್ಲೂ ವಂಚನೆ ನಡೆದ ಶಂಕೆ ಇದ್ದು, ಇಲ್ಲಿ ಲೂಟಿ ಮಾಡಿರುವ ಹಣದ ತನಿಖೆಗಾಗಿ ಬ್ಯಾಂಕ್ ಮೂರು ತಂಡ ನಿಯೋಜನೆ ಮಾಡಲಾಗಿದೆ. ಈ ತಂಡದಲ್ಲಿ ಚಾಟರ್ಡ್ ಅಕೌಂಟಟ್, ಐಟಿ ಪರಿಣಿತರು ಸೇರಿದ್ದು, ಮೂವರ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ.
ವಂಚಕ ಪ್ರವೀಣ್
ಸದ್ಯಕ್ಕೆ ಪ್ರವೀಣ್ ನಾಲ್ಕರಿಂದ ನಾಲ್ಕುವರೆ ಕೋಟಿಯಷ್ಟು ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಪ್ರವೀಣ ಪತ್ರಿಯನ್ನು ಅಮಾನತು ಮಾಡಿರುವ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ, ಪಾಸ್ ಪೋರ್ಟ್ ಕೂಡ ಹೊಂದಿರುವ ಪ್ರವೀಣ ಎಲ್ಲೂ ತಪ್ಪಿಸಿಕೊಂಡು ಹೋಗದಂತೆ ಪಾಸ್ ಪೋರ್ಟ್ ಕೂಡಾ ಜಪ್ತಿ ಮಾಡಲಾಗಿದೆ. ಜೊತೆಗೆ ದಿನಾಲೂ ಡಿಸಿಸಿ ಬ್ಯಾಂಕ್ ಬಾಗಲಕೋಟೆ ಕೇಂದ್ರ ಕಚೇರಿಯಲ್ಲಿ ಇರುವಂತೆ ಸೂಚನೆ ನೀಡಿದ್ದು, ತನಿಖೆ ನಂತರ ಬ್ಯಾಂಕ್ ಕ್ರಿಮಿನಲ್‌ಕೇಸ್ ಹಾಕೋದಾಗಿ ತಿಳಿಸಿದೆ. ಅಲ್ಲದೇ ಸೂಳಿ ಭಾವಿಯಲ್ಲಿ ಆತನಿಗೆ ಸೇರಿದ 6 ಎಕರೆ ಜಮೀನು ಇದೆ. ನೆಲಮಂಗಲ್ಲಿ ಪ್ರವೀಣ್ ತಾಯಿ ಹೆಸರಿನಲ್ಲಿ ಒಂದು ಸೈಟ್ ಇದೆ. ಆತ ಬ್ಯಾಂಕ್ ಖಾತೆ ಹೊಂದಿದ್ದು, ಅವುಗಳನ್ನೆಲ್ಲಾ ಜಪ್ತಿ ಮಾಡಿ ಹಣ ಸಂದಾಯ ಮಾಡಿಕೊಳ್ಳುತ್ತೇವೆ ಅಂತಾರೆ ಬ್ಯಾಂಕ್ ಎಂಡಿ.
ವರದಿ- ಮಂಜುನಾಥ್ ತಳ್ವಾರ್