ಶಿವಮೊಗ್ಗ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರು ವಾಮ ಮಾರ್ಗದಿಂದ ಆಸ್ತಿ ಮಾಡಿದ್ದಲ್ಲ. ಯಾರನ್ನ ನಂಬಬೇಕೋ ಗೊತ್ತಾಗುತ್ತಿಲ್ಲ… ಎಂದು ಡಾ. ವಿಶ್ವ ಸಂತೋಷ ಭಾರತಿ ಗುರೂಜಿ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.
ವಿಶ್ವ ಸಂತೋಷ ಭಾರತಿ ಗುರೂಜಿ, ಸರಳ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಖಂಡನೀಯ. ಕೆಲವೊಂದು ಕಾರ್ಯಕ್ರಮವನ್ನು ಅವರೊಂದಿಗೆ ಹಂಚಿಕೊಂಡಿದ್ದೇವೆ. ಗುರೂಜಿ ವಾಮ ಮಾರ್ಗದಿಂದ ಆಸ್ತಿ ಮಾಡಿದ್ದಲ್ಲ. ಅವರ ಜತೆಗೆ ಇದ್ದುಕೊಂಡು ಅವರನ್ನು ಕೊಲೆ ಮಾಡಿದ್ದು ಅಕ್ಷಮ್ಯ ಅಪರಾಧ. ಹಾಗಾಗಿ ಸರ್ಕಾರ ಸಾರ್ವಜನಿಕ ವ್ಯಕ್ತಿಗಳಿಗೆ ಹೆಚ್ಚಿನ ಭದ್ರತೆ ಕೊಡಬೇಕಾಗುತ್ತದೆ. ಭಕ್ತರ ರೂಪದಲ್ಲಿ ಬಂದು ಚೂರಿ ಹಾಕ್ತಾರೆ ಎಂದರೆ ಯಾರನ್ನು ನಂಬಬೇಕೋ ಬಿಡಬೇಕೋ ಗೊತ್ತಾಗುತ್ತಿಲ್ಲ ಎಂದರು.
Laxmi News 24×7