ಬಳ್ಳಾರಿ: ಲಾರಿ ಚಕ್ರಕ್ಕೆ ಸಿಲುಕಿ ವೃದ್ಧೆಯೊಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ತೋರಣಗಲ್ ನಿವಾಸಿ ಗಂಗಮ್ಮ ಮೃತರೆಂದು ತಿಳಿದುಬಂದಿದೆ.
ಕಾರ್ಖಾನೆಯ ಎದುರು ನಡೆದು ಹೋಗುತ್ತಿದ್ದ ವೃದ್ಧೆಯ ಮೇಲೆ ಲಾರಿ ಹರಿದಿದೆ. ಚಕ್ರದಡಿ ಸಿಲುಕಿದ ಮಹಿಳೆಯ ದೇಹ ಛಿದ್ರವಾಗಿದೆ. ಭೀಕರ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತೋರಣಗಲ್ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.