ಉದ್ಧವ್ ಠಾಕ್ರೆ ಭಾವನಾತ್ಮ ವ್ಯಕ್ತಿ. ಅವರಿಗೆ ರಾಜಕೀಯ ಗೊತ್ತಿಲ್ಲ. ಹೀಗಾಗಿ ಇದನ್ನು ಶರದ್ ಪವಾರ್ ಸರಿಯಾಗಿ ಉಪಯೋಗ ತಿಳಿದುಕೊಳ್ಳುತ್ತಿದ್ದಾರೆ. 50 ಶಾಸಕರು ಹೋದವರಲ್ಲಿ 10 ಜನ ಪಕ್ಷೇತರರು ಹೋಗಿದ್ದಾರೆ. ಅದರಲ್ಲಿ ಶರದ್ ಪವಾರ್ ಕಟ್ಟಾ ಬೆಂಬಲಿಗರಿದ್ದಾರೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರ ಬರುತ್ತಿದೆ, ಮುಖ್ಯಮಂತ್ರಿ ಆಗಬೇಕು ಎಂದು ಬಾಳಾಸಾಹೇಬ ಠಾಕ್ರೆ ಅವರ ವಿಚಾರಧಾರೆಗಳಿಗೆ ತೀಲಾಂಜಲಿ ಇಟ್ಟು ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆ ಕೈ ಜೋಡಿಸಿದ್ದಾರೆ.
ನನ್ನ ಜೀವ ಇರೋವರೆಗೂ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ಭಾಷಣದಲ್ಲಿ ಅದೆಷ್ಟೋ ಬಾರಿ ಬಾಳಾಸಾಹೇಬ ಠಾಕ್ರೆ ಹೇಳಿದ್ದರು. ಬಾಳಾಸಾಹೇಬ ಠಾಕ್ರೆ ಅವರು ಕಾಂಗ್ರೆಸ್ ಪಕ್ಷ ಹಾಗೂ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಟೀಕೆ ಮಾಡಿದ ವಿಡಿಯೋಗಳು ಸಾಕಷ್ಟು ವೈರಲ್ ಆಗಿದೆ. ಶಿವಸೇನೆ ಮತ್ತು ಬಿಜೆಪಿ ಹಿಂದುತ್ವದ ಮೇಲೆ ಇರುವ ಪಕ್ಷಗಳು. ಆದರೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಅನೈತಿಕ ಘಟಬಂಧನ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
Laxmi News 24×7