ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಆದ್ರೇ ಖಾನಾಪುರ ತಾಲೂಕಿನ ಸಂತೆ ಕೂಡ ಇದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಹಿನ್ನಲೆಯಲ್ಲಿ, ಖಾನಾಪುರ ಬಂದ್ ವಾಪಾಸ್ ಪಡೆಯಲಾಗಿದೆ.
ಈ ಬಗ್ಗೆ ಸುದ್ದಿಗಾರರಿಗೆ ಖಾನಾಪುರದಲ್ಲಿ ಮಾಹಿತಿ ನೀಡಿದಂತ ಶಾಸಕ ಅಂಜಲಿ ನಿಂಬಾಳ್ಕರ್, ಅಗ್ನಿಪಥ್ ಯೋಜನೆ ವಿರೋಧಿಸಿ ಖಾನಾಪುರ ಬಂದ್ ಗೆ ಕರೆ ನೀಡಲಾಗಿತ್ತು. ಖಾನಾಪುರ ಸಂತೆ ಇರೋ ಕಾರಣ, ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಬಂದ್ ವಾಪಾಸ್ ಪಡೆದಿದ್ದೇವೆ ಎಂದರು.
ಸಾರ್ವಜನಿಕರಿಗೆ ತೊಂದರೆಯೋ ಹಿನ್ನಲೆಯಲ್ಲಿ ಖಾನಾಪುರ ಬಂದ್ ವಾಪಾಸ್ ಪಡೆಯಲಾಗಿದೆ. ಬೆಳಗಾವಿ ನಗರದಲ್ಲಿ ಯುವಕರು ಬಂದ್ ಆಚರಿಸಲಿದ್ದಾರೆ. ಖಾನಾಪುರದಲ್ಲಿ ಮತ್ತೆ ಬಂದ್ ಆಚರಿಸೋ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸೋದಾಗಿ ತಿಳಿಸಿದರು.