Breaking News

ಯಾರಾಗಲಿದ್ದಾರೆ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ?

Spread the love

ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳಲ್ಲಾ ಸೇರಿ ಮೀಟಿಂಗ್‌ ಮಾಡಿ ರಣತಂತ್ರ ರೂಪಿಸಿದ್ರೆ ಇತ್ತ ಆಡಳಿತ ರೂಢ ಬಿಜೆಪಿ ಈ ಬಾರಿ ಕೂಡ ನಮ್ಮ ಪಕ್ಷದವರೇ ರಾಷ್ಟ್ರಪತಿ ಆಗ್ಬೇಕು ಅಂತ ಪ್ರತಿತಂತ್ರ ಹೆಣೀತಿದೆ. ಬಿಜೆಪಿ ಅಭ್ಯರ್ಥಿಯಾಗಿ ಈಗಿರೋ ರಾಮನಾಥ್‌ ಕೋವಿಂದ್‌ ಅವರೇ ಮತ್ತೆ ಸ್ಪರ್ಧೆ ಮಾಡೋದು ಸದ್ಯ ದೂರದ ಮಾತು.

ಹಾಗಾಗಿ ಹೊಸ ಅಭ್ಯರ್ಥಿ ಯಾರು ಅನ್ನೋದೆ ಈಗ ಬಿಜೆಪಿ ವಲಯದಲ್ಲಿ ಮೂಡಿರೋ ಕುತೂಹಲ. ಸದ್ಯಕ್ಕೆ ಪ್ರಧಾನಿ ಮೋದಿ G-7 ದೇಶಗಳ ಸಭೆಗೆ ಅತಿಥಿಯಾಗಿ ಭಾಗವಹಿಸುವ ಸಲುವಾಗಿ ಜರ್ಮನಿಗೆ ಹಾರಲಿದ್ದು ಇದಕ್ಕೂ ಮುನ್ನವೇ ಅಭ್ಯರ್ಥಿಯ ಹೆಸರನ್ನ ಅಂತಿಮಗೊಳಿಸುವ ಸಾಧ್ಯತೆ ಇದೆ. ಇದಾದ ಬಳಿಕ ದೇಶಾದ್ಯಂತ ಕ್ಯಾಂಪೇನ್‌ ಮಾಡಲಿದೆ. ಇದರ ಭಾಗವಾಗಿ ಇಂದು 14 ಸದಸ್ಯರನ್ನ ಒಳಗೊಂಡ ಕ್ಯಾಂಪೇನ್‌ ಮ್ಯಾನೇಜ್‌ಮೆಂಟ್‌ ಕಮಿಟಿಯನ್ನ ರಚನೆ ಮಾಡಿದೆ. ಇದಕ್ಕೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಸಂಚಾಲಕರಾಗಿದ್ದಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ