ಬೆಂಗಳೂರು : ಕರ್ನಾಟಕದ ಉಪಲೋಕಾಯುಕ್ತರಾಗಿರುವ , ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ಬುಧವಾರ ಬೆಳಗ್ಗೆ ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯ ಸರಕಾರ ಬಿ.ಎಸ್. ಪಾಟೀಲ್ ಅವರಿಗೆ ಪದೋನ್ನತಿ ನೀಡಿದ್ದು,ಸರಕಾರದ ಶಿಫಾರಸಿಗೆ ರಾಜ್ಯಪಾಲರಾದ ಗೆಹಲೋಟ್ ಅವರು ಸಹಿ ಹಾಕಿದ್ದಾರೆ.
ಬುಧವಾರ ಬೆಳಗ್ಗೆ 9.45 ಕ್ಕೆ ರಾಜ ಭವನದಲ್ಲಿ 9 ನೇ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಾಯುಕ್ತರಾಗಿದ್ದ ಪಿ. ವಿಶ್ವನಾಥ್ ಶೆಟ್ಟಿ ನಿವೃತ್ತಿ ಘೋಷಿಸಿದ ಬಳಿಕ ಸ್ಥಾನ ತೆರವಾಗಿತ್ತು.
Laxmi News 24×7