ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಅರುಣ್ ಹಲ್ಲೆಗೊಳಗಾದ ವ್ಯಕ್ತಿ. ಅರುಣ್ ಸ್ನೇಹಿತನ ಬರ್ತ್ ಡೇ ಅಂಗವಾಗಿ ಕ್ಯಾಂಡಲ್ ತರಲು ಹೋಗಿದ್ದ. ಬಾಗೇಪಲ್ಲಿಯ ಮುಖ್ಯ ರಸ್ತೆಯ ಬಾರ್ ಬಳಿ ತನ್ನ ಸ್ನೇಹಿತ ರವಿ ನೋಡಿ ಮಾತನಾಡಲು ಬೈಕ್ ನಿಲ್ಲಿಸಿದ್ದಾನೆ.
ಈ ವೇಳೆ ರವಿ ಜೊತೆ ಸಲುಗೆಯಿಂದ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದನ್ನು ಕಂಡ ರವಿಯ ಭಾವ ಯಾಕೆ ಅವಾಚ್ಯ ಪದ ಬಳಸ್ತೀಯಾ ಅಂತ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿದ್ದಾನೆ. ಈ ವೇಳೆ ರವಿಯ ಭಾವ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿದ್ದಾನೆ.
Laxmi News 24×7