Breaking News

ಶಿಕ್ಷಕರ ಸಮಸ್ಯೆ ನೀಗಿಸಲು ಶಿಕ್ಷಕನೇ ಆಗಬೇಕೆಂದೇನಿಲ್ಲ:ಪ್ರಕಾಶ ಹುಕ್ಕೇರಿ

Spread the love

ಬೆಳಗಾವಿ: ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ನಾನು ಆಯ್ಕೆಯಾದರೆ ಅವುಗಳನ್ನೆಲ್ಲ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಶಿಕ್ಷಕರ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುತ್ತೇನೆ…

ವಿಧಾನ ಪರಿಷತ್‌ ಚುನಾವಣೆಯ ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು  ಹಂಚಿಕೊಂಡ ಮಾತುಗಳಿವು.

ಶಿಕ್ಷಕರ ಸಮಸ್ಯೆ ನೀಗಿಸಲು ಶಿಕ್ಷಕನೇ ಆಗಬೇಕೆಂದೇನಿಲ್ಲ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವವರು ಬೇಕು ಎಂದರು. ಅವರ ಸಂದರ್ಶನದ ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ.

 

* ನಿಮ್ಮ ಪಕ್ಷದಲ್ಲಿ ಒಗ್ಗಟ್ಟು ಹೇಗಿದೆ?
-ವಿಧಾನ ಪರಿಷತ್‌ ಚುನಾವಣೆಯನ್ನು ಕಾಂಗ್ರೆಸ್‌ನ ಎಲ್ಲ ನಾಯಕರೂ ಒಗ್ಗಟ್ಟಿನಿಂದಲೇ ಎದುರಿಸುತ್ತಿದ್ದೇವೆ. ಎಲ್ಲರೂ ಸೇರಿ ಟಿಕೆಟ್‌ ಕೊಟ್ಟಿದ್ದಾರೆ. ಎಲ್ಲರೂ ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಗೊಂದಲವಿಲ್ಲ.

* ಪಕ್ಷೇತರ ಅಭ್ಯರ್ಥಿ ಎನ್‌.ಬಿ.ಬನ್ನೂರ ಸ್ಪರ್ಧೆಯಿಂದ ಕಾಂಗ್ರೆಸ್‌ ಮತಗಳು ವಿಭಜನೆಯಾಗುತ್ತವೆಯೇ?
-ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳು ಗಟ್ಟಿಯಾಗಿರುತ್ತವೆ. ಈ ಹಿಂದೆಯೂ ವಿಭಜನೆ ಆಗಿಲ್ಲ, ಈಗಲೂ ಆಗುವುದಿಲ್ಲ, ಮುಂದಿನ ಚುನಾವಣೆಗಳಲ್ಲೂ ಮತಗಳು ಹಂಚಿಹೋಗುವ ಭಯ ನಮಗೆ ಇಲ್ಲ. ಹಾಗಾಗಿ, ಬನ್ನೂರ ಸ್ಪರ್ಧೆಯಿಂದ ನಮಗೇನೂ ಹಿನ್ನಡೆ ಆಗುವುದಿಲ್ಲ.

* ನೀವು ಶಿಕ್ಷಕರೇ ಅಲ್ಲ, ಹೆಚ್ಚು ಓದಿದವರಲ್ಲ…ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರಲ್ಲ?ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದವರ ಪೈಕಿ ಬಹುತೇಕರು ಶಿಕ್ಷಕರೇ ಅಲ್ಲ. ನನಗಿರುವ ಮಾಹಿತಿ ಪ್ರಕಾರ, ಹಾಲಿ ಸದಸ್ಯ ಬಸವರಾಜ ಹೊರಟ್ಟಿ ಸೇರಿ ಒಂದಿಬ್ಬರು ಶಿಕ್ಷಕರಷ್ಟೇ ಚುನಾಯಿತರಾಗಿದ್ದಾರೆ. ಹಾಗಾಗಿ, ವಿರೋಧ ಪಕ್ಷದವರು ಮಾಡಿದ ಆರೋಪಕ್ಕೆ ತಲೆಬಾಗಲು ಆಗುವುದಿಲ್ಲ. ಇಷ್ಟಕ್ಕೂ, ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಯಾವ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ? ಅವರೇನು ಶಿಕ್ಷಕರಾ? ನಾನು ಶಿಕ್ಷಕನಲ್ಲದಿರಬಹುದು. ಆದರೆ, ಅವರ ಸಮಸ್ಯೆಗೆ ಧ್ವನಿಯಾಗುತ್ತೇನೆ. ಈ ಹಿಂದೆ ಶಾಸಕ ಹಾಗೂ ಸಂಸದನಿದ್ದಾಗ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಈಗ ಶಿಕ್ಷಕರ ಸೇವೆ ಮಾಡುವುದಕ್ಕಾಗಿಯೇ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಿದ್ದೇನೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ