Breaking News

30 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಕಾನ್ಸ್ಟೇಬಲ್

Spread the love

ಕಲಬುರಗಿ:ಮೂವತ್ತು ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ನಗರದ ಬ್ರಹ್ಮಪುರ ಪೋಲಿಸ್ ಠಾಣೆಯ ಕಾನಸ್ಟೇಬಲ್ ಭೀಮಾ ನಾಯಕ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಬ್ದುಲ್ ಮುಸ್ತಫಾ ಎಂಬುವವರು ಎಸಿಬಿಗೆ ದೂರು ನೀಡಿದ್ದು,‌ ಭೀಮಾ ನಾಯಕ್ ಸೈಟ್ ವ್ಯವಹಾರದ ಸೆಟಲ್ಮೆಂಟ್ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ.

 

ಅಬ್ದುಲ್ ಅಜೀಜ್ ಮುಸ್ತಫಾ ಎಂಬುವವನ ವಿರುದ್ಧ ಸೈಟ್ ವಿಚಾರವಾಗಿ ಕೆಲವರು ದೂರು ನೀಡಿದ್ದು, ಠಾಣೆಗೆ ಕರೆಯಿಸಿ ಸಮಸ್ಯೆ ಇತ್ಯರ್ಥ ಮಾಡಿದ್ದನು. ವ್ಯವಹಾರ ಸೆಟಲ್ಮೆಂಟ್ ಮಾಡಿದ್ದಕ್ಕಾಗಿ ಒಂದು ಲಕ್ಷ ಹಣ ನೀಡುವಂತೆ ಭೀಮಾ ನಾಯಕ ಡಿಮ್ಯಾಂಡ್ ಇಟ್ಟಿದ್ದನಂತೆ. ಇದೇ ವಿಷಯವಾಗಿ ನಿನ್ನೆ ರಾತ್ರಿ 30 ಸಾವಿರ ಹಣ ಪಡೆಯುವಾಗ ಕಲಬುರಗಿ ನಗರದ ರೈಲ್ವೆ ನಿಲ್ದಾಣದ ಬಳಿ ರೆಡ್ ಹ್ಯಾಂಡ್ ಆಗಿ ಎಸಿಬಿಗೆ ಸಿಕ್ಕಿ ಬಿದ್ದಿದ್ದಾನೆ. ಇದೀಗ ಕಾನ್‌ಸ್ಟೇಬಲ್ ಭೀಮಾ ನಾಯಕ್‌ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ