Breaking News

ಅಭಿಮಾನಿಗಳಿಂದ ಇದೇಕೆ ಅತಿರೇಕ? ಅಪ್ಪು ಪುತ್ಥಳಿ ಅನಾವರಣದಂದು ಕುರ್ಚಿಗಳು ಪೀಸ್‌ ಪೀಸ್‌!

Spread the love

ವಿಜಯನಗರ: ಹಲವಾರು ರೀತಿಯ ಸಮಾಜಸೇವೆ ಮಾಡಿ ಜನರ ಪಾಲಿಗೆ ದೇವರು ಎನಿಸಿಕೊಂಡಿರುವ ನಟ ಪುನೀತ್ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಕೋಟ್ಯಂತರ ಮಂದಿ. ಇದೇ ಕಾರಣಕ್ಕೆ ತಮ್ಮ ಪ್ರೀತಿಯ ಅಪ್ಪು ಸದಾ ತಮ್ಮ ಕಣ್ಮುಂದೆ ಇರಬೇಕು ಎಂದು ಬಯಸಿರುವ ಹೊಸಪೇಟೆಯ ಅಭಿಮಾನಿಗಳು ಪುನೀತ್‌ ಅವರ ಏಳೂವರೆ ಅಡಿ ಎತ್ತರದ ಪುತ್ಥಳಿಯನ್ನು ಭಾನುವಾರ (ಜೂನ್‌ 5) ಅನಾವರಣಗೊಳಿಸಿದ್ದಾರೆ.

 

ಪುನೀತ್ ವೃತ್ತದಲ್ಲಿ ಸಚಿವ ಆನಂದ ಸಿಂಗ್ ಹಾಗೂ ಅವರ ಮಗ ಸಿದ್ದಾರ್ಥ್ ಸಿಂಗ್ ಸಹಕಾರದೊಂದಿಗೆ 7.4 ಎತ್ತರದ ಕಂಚಿನ ಪ್ರತಿಮೆ ಮಾಡಿ ಇಂದು ಅನಾವರಣಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ
ನಟರಾದ ರಾಘವೇಂದ್ರ ರಾಜ್ ಕುಮಾರ್, ಅಜಯ್ ರಾವ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಸಚಿವ ಆನಂದ್ ಸಿಂಗ್ ಭಾಗವಹಿಸಿದ್ದರು. ಇದರಿಂದ ಹೊಸಪೇಟೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಆದರೆ ತಮ್ಮ ನೆಚ್ಚಿನ ನಟನಿಗೆ ಭಾವಪೂರ್ಣ ನಮನ ಸಲ್ಲಿಸುವ ಬದಲು ಅಭಿಮಾನಿಗಳು ಅತಿರೇಕವಾಡಿದ್ದು, ಇಡೀ ಸಮಾರಂಭಕ್ಕೆ ಕಪ್ಪುಚುಕ್ಕೆಯಾಗಿದೆ. ಅಭಿಮಾನಿಗಳ ಅತಿರೇಕಕ್ಕೆ ನೂರಾರು ಕುರ್ಚಿಗಳು ಪೀಸ್ ಪೀಸ್ ಆಗಿದೆ. ರಸ್ತೆಯದ್ದಕ್ಕೂ ಕುರ್ಚಿಗಳು ಮುರಿದು ಬಿದ್ದಿವೆ.

ಕಾರ್ಯಕ್ರಮದುದ್ದಕ್ಕೂ ಅಭಿಮಾನಿಗಳು ಗಲಾಟೆ ಮಾಡುತ್ತಾ, ಕುರ್ಚಿಗಾಗಿ ಹೊಡೆದಾಟ ಮಾಡಿಕೊಂಡಿದ್ದು ಅಪಾರ ನಷ್ಟ ಉಂಟು ಮಾಡಿದ್ದಾರೆ. 


Spread the love

About Laxminews 24x7

Check Also

ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!

Spread the loveಕೊಪ್ಪಳ, ನವೆಂಬರ್​ 06: ನಿನ್ನನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಸ್ವಂತ ಅಣ್ಣನೇ ಅಪ್ರಾಪ್ತೆ ತಂಗಿ ಜೊತೆ ದೈಹಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ