Breaking News

ಕನ್ನಡದ ಡಿಂಡಿಮವನ್ನು ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ: ನಟ ಜಗ್ಗೇಶ್

Spread the love

ಬೆಂಗಳೂರು: ನನಗೆ ಯಾವ ನಿರೀಕ್ಷೆ ಇರಲಿಲ್ಲ. ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ ಸಿಎಂ ಹಾಗೂ ಸ್ನೇಹಿತರು, ಶಾಸಕರು ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ. ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಬಿಜೆಪಿ ರಾಜ್ಯಸಭೆ ಅಭ್ಯರ್ಥಿ ನಟ ಜಗ್ಗೇಶ್ ಹೇಳಿದರು.

 

ಬಿಜೆಪಿ ಕಚೇರಿಯಲ್ಲಿ ಮಾತಾನಾಡಿದ ಅವರು, ಚಿಂತನೆಗಳು ಇತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಂತ ನನಗೆ ಕಲ್ಪನೆ ಇರಲಿಲ್ಲ. ಪಕ್ಷ ಹಾಗೂ ಸಂಘಟನೆಗೆ ಧನ್ಯವಾದ. ನನಗೆ ಹಿರಿಯರು ಪೋನ್ ಮಾಡಿ ದಾಖಲೆ ರೆಡಿ‌ ಮಾಡಿಕೊಳ್ಳಲು ಹೇಳಿದರು. ಆಗಲು ನನಗೆ ನಂಬಿಕೆ ಇರಲಿಲ್ಲ ಹೀಗಾಗಿ ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎಂದರು.

ನಾಳೆ ನಾಮಿನೇಷನ್ ಮಾಡುತ್ತೇನೆ. ಇವತ್ತು ಇದಕ್ಕೆ ಬೇಕಾದ ದಾಖಲೆ ಸಿದ್ದತೆ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಹೆಂಡತಿ ಕೂಡ ಇದರಲ್ಲಿ ಬಹಳ ಸಹಾಯ ಮಾಡುತ್ತಿದ್ದಾಳೆ. ಅವಳಿಗೂ ಧನ್ಯವಾದ. ನನಗೆ ನಿರೀಕ್ಷೆ ಇಲ್ಲದಿರುವುದರಿಂದ ದಾಖಲೆ ಸಂಗ್ರಹಿಸಲು ವಿಳಂಬ ಆಗಿದೆ. ದಾಖಲೆ ಸಂಗ್ರಹದ ಒತ್ತಡದಲ್ಲಿ ಇದ್ದೇನೆ ಎಲ್ಲಾ ಮುಗಿಸಿಕೊಂಡು ನಾಳೆ ನಾಮಪತ್ರ ಸಲ್ಲಿಕೆ‌ ಮಾಡುತ್ತೇನೆ ಎಂದರು.

ನಾನು ಯಾವುದೇ ಪ್ರಯತ್ನ ಮಾಡಿಲ್ಲ. ನಾನು ಯಾವ ಹುದ್ದೆನೂ ಕೇಳಿಲ್ಲ. ಕಳೆದ ಬಾರಿ ಕಡೆಗಳಿಗೆಯಲ್ಲಿ ಯಶವಂತಪುರದಲ್ಲಿ ನಿಲ್ಲಲು ಹೇಳಿದರು. ಆಗ ನಾನು ಬೇಡ ಅಂದೆ ಕಾರಣ ಏನಂದರೆ ನಾವು ವಿಧಾನಸಭೆಗೆ ಸ್ಪರ್ಧೆ ಮಾಡಬೇಕಾದರೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿರಬೇಕು. ಆವತ್ತು ನನ್ನ ಮೇಲೆ ವಿಶ್ವಾಸ ಇತ್ತು 12 ಸಾವಿರ ಇದ್ದ ಮತಗಳನ್ನು 61ಸಾವಿರ ಮತಕ್ಕೆ ತಂದಿದ್ದೆ ನನಗೂ ಆಶ್ಚರ್ಯ ಆಯಿತು. ಇದರಿಂದ ನನಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು ಹೀಗಾಗಿ ನನ್ನ ವೃತ್ತಿಯಲ್ಲಿ ಮುಂದುವರೆಯಿತ್ತಿದ್ದೆ ನನಗೆ ವಕ್ತಾರ ಹುದ್ದೆ ಕೊಟ್ಟಿದ್ರು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು.

ನನಗೆ ಭಾಷೆ ಸಮಸ್ಯೆ ಇಲ್ಲ. ನಾನು ಹಿಂದಿ, ಇಂಗ್ಲಿಷ್, ಕನ್ನಡ ತಮಿಳು ಈ ಎಲ್ಲಾ ಭಾಷೆ ಮಾತನಾಡುತ್ತೇನೆ. ಸ್ವಲ್ಪ ಓದಿ ತಿಳಿದುಕೊಂಡಿದ್ದೇನೆ. ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಹಿರಿಯರ ಸಲಹೆ ಪಡೆಯುತ್ತೇನೆ. ಕಾಯಾ ವಾಚಾ ಮನಸ್ಸಾ ಕನ್ನಡದ ಡಿಂಡಿಮವನ್ನು ಖಂಡಿತವಾಗಿ ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ


Spread the love

About Laxminews 24x7

Check Also

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

Spread the love ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ