ಬೆಂಗಳೂರು: ಕಾರ್ ಗಳ ಮೇಲೆ ಬೃಹತ್ ಮರ ಬಿದ್ದು ಒಂದು ಕಾರ್ ಸಂಪೂರ್ಣ ಜಖಂ ಆಗಿದ್ದು, ಇನ್ನೊಂದು ಭಾಗಶಃ ಜಖಂ ಆಗಿದೆ.
ಸಿಲಿಕಾನ್ ಸಿಟಿಯ ಗಿರಿನಗರದಲ್ಲಿ ಘಟನೆ ನಡೆದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆ ನೆಲ ತೇವವಾಗಿದ್ದರಿಂದ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಎರಡು ಕಾರ್ ಗಳ ಮೇಲೆ ಮರ ಬಿದ್ದಿದ್ದು, ರಸ್ತೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಎರಡು ಕಾರ್‍ಗಳ ಪೈಕಿ ಒಂದು ಕಾರು ಸಂಪೂರ್ಣ ಜಖಂಗೊಂಡಿದ್ದು, ಮತ್ತೊಂದು ಭಾಗಶಃ ಜಖಂ ಆಗಿದೆ.

ಇಂದು ಬೆಳಗ್ಗೆ ಮರ ನೆಲಕ್ಕುರುಳಿದ್ದು, ರಸ್ತೆಯಲ್ಲಿ ಯಾರೂ ಇಲ್ಲದ ಪರಿಣಾಮ ಅದೃಷ್ಟವಶಾತ್ ಭಾರೀ ಅನಾಹುತ ಸಂಭವಿಸಿಲ್ಲ. ಇದರಿಂದಾಗಿ ಗಿರಿನಗರದ ಜನತೆ ಭಯಭೀತರಾಗಿದ್ದಾರೆ.
Laxmi News 24×7