ಬೆಂಗಳೂರು: ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಬುಧವಾರ ನಗರದ ಎಂಟು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಗಳು, ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳ ಮೊದಲ ಸಭೆ ನಡೆಸಿದ್ದಾರೆ.
ಈ ವೇಳೆ ಈ ಹಿಂದಿನ ನಗರ ಪೊಲೀಸ್ ಆಯಕ್ತ ಕಮಲ್ ಪಂತ್ ಅವರು ಏನೆಲ್ಲ ಯೋಜನೆಗಳು ಹಾಗೂ ಕಾನೂನು ಸುವ್ಯವಸ್ಥೆ ತಡೆಯಲು ರೂಪಿಸಿರುವ ತಂತ್ರಗಳು ಯಥಾ ಪ್ರಕಾರ ಮುಂದುವರಿಸಬೇಕು.
ಎಲ್ಲ ಮಾದರಿಯ ಅಪರಾಧಗಳ ನಿಯಂತ್ರಣಕ್ಕೆ ಸೂಚಿಸಿರುವ ತಂತ್ರಗಳು ಈಗಲೂ ಮುಂದುವರಿಯಲಿವೆ. ಅದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಲೋಪವಾದರೆ ಅಮಾನತು
ಯಾವೊಬ್ಬ ಪೊಲೀಸ್ ಅಧಿಕಾರಿ, ಸಿಬಂದಿ ಅಕ್ರಮ ಚಟುವಟಿಕೆ ನಡೆಸುವ ವ್ಯಕ್ತಿಗಳು, ದಂಧೆ ನಡೆಸುವ ವ್ಯಕ್ತಿಗಳ ಜತೆ ಕೈಜೋಡಿಸಿದರೆ ಮುಲಾಜಿಲ್ಲದೆ ಅಮಾನತು ಮಾಡುತ್ತೇನೆ. ಕೆಲವರು ಪರೋಕ್ಷವಾಗಿ ಶಾಮೀಲಾಗಿರುವ ಮಾಹಿತಿ ಸಿಕ್ಕಿದೆ. ಅದನ್ನು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆ ನೀಡಿದರು
Laxmi News 24×7