ಬಾಗಲಕೋಟೆ: ವಕೀಲೆ ಸಂಗೀತಾ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು ಮತ್ತೊಂದು ವೀಡಿಯೋ ತುಣಕು ವೈರಲ್ ಆಗಿದೆ.
ಈ ಹಿಂದೆ ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಆದರೆ ಈಗ ಮಹಾಂತೇಶ್ ಚೊಳಚಗುಡ್ಡ ಅವರ ಮೇಲೆ ಸಂಗೀತಾ ಅವರು ಚಪ್ಪಲಿಯಲ್ಲಿ ಹೊಡೆದ ವೀಡಿಯೋ ವೈರಲ್ ಆಗಿದೆ.
ನಿಜವಾಗಿ ನಡೆದಿದ್ದೇನು?
ಮಹಾಂತೇಶ್ ಚೊಳಚಗುಡ್ಡ ಅವರ ಗಿಫ್ಟ್ ಸೆಂಟರ್ ವಾಗ್ವಾದದಿಂದ ಜಗಳ ಶುರುವಾಗಿತ್ತು. ಮೊದಲು ಸಂಗೀತಾ, ಮಹಾಂತೇಶ್ ಅವರಿಗೆ ಚಪ್ಪಲಿಯಲ್ಲಿ ಹೊಡೆದು, ಚಪ್ಪಲಿ ಎಸೆದಿದ್ದಾರೆ. ಅದಾದ ಬಳಿಕ ಮಹಾಂತೇಶ್ ಸಹ ಮಹಿಳೆಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದರು.
Laxmi News 24×7