Breaking News

ಯಡಿಯೂರಪ್ಪನವರನ್ನು 45 ನಿಮಿಷಗಳ ಕಾಲ &ಬೊಮ್ಮಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾಗಿ: ಬಸನಗೌಡ ಪಾಟೀಲ್ ಯತ್ನಾಳ್

Spread the love

ಕಲಬುರಗಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತಾಡಿದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ತಮ್ಮ ಕುರಿತಾದ ಒಂದು ಮೂಲಭೂತ ಪ್ರಶ್ನೆಗೆ ಸಮಾಧಾನ ನೀಡಿದರು. ಯತ್ನಾಳ್ ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಮಾಧ್ಯಮಗಳ ಎದುರೇ ಯಾಕೆ ರೇಗಾಡುತ್ತಾರೆ, ಪಕ್ಷದ ವೇದಿಕೆಯಲ್ಲಿ ಅಥವಾ ಹೈಕಮಾಂಡ್ (high command) ಮುಂದೆ ಆ ವಿಷಯಗಳನ್ನು ಯಾಕೆ ಚರ್ಚಿಸುವುದಿಲ್ಲ ಅಂತ ಮಾಧ್ಯಮದವರು ಕೇಳಿದಾಗ ಶಾಸಕರು; ಪಕ್ಷದ ವೇದಿಕೆಯಲ್ಲಿ ತನಗೆ ಮಾತಾಡುವ ಅವಕಾಶ ಸಿಗೋದಿಲ್ಲ,

ವೇದಿಕೆ ಮೇಲೆ ಕೂತವರು ಮಾತ್ರ ಮಾತಾಡಿ ಇಳಿದುಹೋಗುತ್ತಾರೆ ಎಂದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿ ಎಸ್ ಯಡಿಯೂರಪ್ಪನವರನ್ನು (BS Yediyurappa) ಸುಮಾರು 45 ನಿಮಿಷಗಳ ಕಾಲ ತರಾಟೆಗೆ ತೆಗೆದುಕೊಂಡಿದ್ದೇನೆ, ಅವರು ನನ್ನನ್ನು ದಬಾಯಿಸುವ ಪ್ರಯತ್ನ ಮಾಡಿದರು. ಆದರೆ ಅದೆಲ್ಲ ನಡೆಯೋದಿಲ್ಲ, ನೀವು ಮುಖ್ಯಮಂತ್ರಿಯಾಗಿದ್ದೀರಿ ನಾನು ಶಾಸಕ, ಹಾಗಾಗಿ ನಾನು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಅಂತ ಅವರಿಗೆ ಹೇಳಿದೆ ಎಂದು ಯತ್ನಾಳ್ ಹೇಳಿದರು.

ಕಳೆದ ಬೆಳಗಾವಿ ಅಧಿವೇಶನದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾಗಿ ಹೇಳಿದ ಯತ್ನಾಳ್ ಅವರು ಯಾರ ಮುಲಾಜೂ ತಮಗಿಲ್ಲ ಎಂದು ಹೇಳಿದರು. ತಾವು ಹಾಗೆ ಮಾತಾಡಿದ ಬಳಿಕ ಕೆಲವು ಸುಧಾರಣೆ ಮತ್ತು ಬದಲಾವಣೆಳಾಗಿವೆ, ಅದರ ಶ್ರೇಯಸ್ಸು ಖಂಡಿತ ತನಗೆ ಸಲ್ಲಬೇಕು ಎಂದ ಯತ್ನಾಳ್ 


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ