ಬೆಂಗಳೂರು: ಕಾಂಗ್ರೆಸ್ ಆರಂಭಿಸಿರುವ ಡಿಜಿಟಲ್ ಸದಸ್ಯತ್ವ ಅಭಿಯಾನವು ರಾಜ್ಯದಲ್ಲಿ ಪಕ್ಷದ ನೈತಿಕ ಬಲ ಹೆಚ್ಚಾಗುವಂತೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಈಗಾಗಲೇ 78 ಲಕ್ಷಕ್ಕೂ ಅಧಿಕ ಮಂದಿ ಡಿಜಿಟಲ್ ಸದಸ್ಯತ್ವದಲ್ಲಿ ನೋಂದಣಿ ಮಾಡಿಕೊಂಡಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ.
ದೇಶದಾದ್ಯಂತ 2.6 ಕೋಟಿ ಜನರು ಡಿಜಿಟಲ್ ಸದಸ್ಯತ್ವದಲ್ಲಿ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಶೇ.30ರಷ್ಟು ಭಾಗ ರಾಜ್ಯದಿಂದಲೇ ಆಗಿದೆ.
ಈ ಪ್ರಕ್ರಿಯೆಯ ಮೂಲಕ, ಪಕ್ಷವು ರಾಜ್ಯದಾದ್ಯಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಎಲ್ಲಾ 58,186 ಬೂತ್‌ಗಳನ್ನೂ ಸಂಪರ್ಕಿಸಿದ್ದು, 2.2 ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆಂದು ತಿಳಿದುಬಂದಿದೆ.